Saturday, September 1, 2018

ಯಕ್ಷಗಾನ ಪ್ರದರ್ಶನಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಯಾಕೆ ಸೋಲುತ್ತವೆ?


ಕೆಲ ದಿನಗಳ ಹಿಂದೆ ಸಿರಿಕಲಾ ಮೇಳದ ವಿಜಯ ವಸುಂಧರ ಎಂಬ ಯಕ್ಷಗಾನ ಪ್ರದರ್ಶನ ನೋಡಿದೆ. ಬಹುತೇಕ ಹವ್ಯಾಸಿ ಕಲಾವಿದರು ಮತ್ತು ಈಗಷ್ಟೇ ಯಕ್ಷಗಾನ ಕಲಿಯುತ್ತಿರುವವರು ಇರುವ ತಂಡದ ಒಟ್ಟು ಪ್ರಸಂಗ ಪ್ರಸ್ತುತಿ ಚೆನ್ನಾಗಿಯೇ ಇತ್ತು.
ಪ್ರಸಂಗ ಪ್ರಾರಂಭವಾಗುವುದಕ್ಕೆ ಮೊದಲು ಇನ್ನೂ ನಾಟ್ಯ ಕಲಿಯುತ್ತಿರುವ ಮಕ್ಕಳಿಂದ ಕೋಡಂಗಿ ಕುಣಿತ, ಬಾಲಗೋಪಾಲ, ನಿತ್ಯ ಸ್ತ್ರೀ ವೇಷ ಮತ್ತು ಒಡ್ಡೋಲಗದ ನಾಟ್ಯಗಳ ಪ್ರದರ್ಶನ ಇತ್ತು. ಇದನ್ನು ನಿರ್ದೇಶಿಸಿದವರು ಹಿರಿಯ ಕಲಾವಿದರಾದ ಶ್ರೀ .ಪಿ.ಪಾಠಕ್ ಮತ್ತು ಕುಮಾರಿ ಅರ್ಪಿತಾ ಹೆಗಡೆಯವರು (ಇವರು ತಂಡದ ನೃತ್ಯ ಶಿಕ್ಷಕಿ ಮತ್ತು ನಿರ್ದೇಶಕಿ ಕೂಡಾ). ಯಕ್ಷಗಾನದಲ್ಲಿ ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿರುವ ಪ್ರಾಕಾರಗಳನ್ನು ಮತ್ತೆ ಪ್ರದರ್ಶಿಸಿದ್ದು ಶ್ಲಾಘನೀಯ. ನಾಟ್ಯವನ್ನು ಕಲಿಯುತ್ತಿರುವ ಹೊಸಬರಿಂದ ಸಭಾಲಕ್ಷಣ ಮಾಡಿಸುವುದು ಅತ್ಯಾವಶ್ಯಕ. ರಂಗದ ನಡೆಗಳನ್ನು ಕಲಿಯುವುದಕ್ಕೆ, ಹಿಮ್ಮೇಳದೊಂದಿಗೆ ಹೆಜ್ಜೆ ಹಾಕುವುದನ್ನು ಅಭ್ಯಾಸ ಮಾಡುವುದಕ್ಕೆ, ಸಭಾಕಂಪನ ಹೋಗಲಾಡಿಸುವುದಕ್ಕೆಲ್ಲಾ ಇದು ತುಂಬಾ ಸಹಕಾರಿ. ಅಷ್ಟೇ ಅಲ್ಲದೆ ಸಭಾಲಕ್ಷಣದ ಪದ್ಯರಚನೆ ಹೇಗಿದೆಯೆಂದರೆ ಪ್ರತೀ ತಾಳದ ಎಲ್ಲಾ ಹೆಜ್ಜೆಗಳನ್ನು ರಂಗದ ಮೇಲೆ ಅಭ್ಯಾಸ ಮಾಡುವುದಕ್ಕೆ ಇದು ಅನುವು ಮಾಡಿಕೊಡುತ್ತದೆ. ಸಿರಿಕಲಾ ಮೇಳದ ನಡೆ ಇತರೇ ತಂಡಗಳೂ ಅನುಸರಿಸಬೇಕಾದ ವಿಷಯ

ವಿಜಯ ವಸುಂಧರ ಪ್ರಸಂಗ ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಜೀವನವನ್ನಾಧರಿಸಿದ ಕಥೆ. ಸಾಮಾನ್ಯವಾಗಿ ಐತಿಹಾಸಿಕ ಕಥೆಗಳನ್ನು ಯಕ್ಷಗಾನಕ್ಕೆ ಅಳವಡಿಸುವುದು ಸುಲಭದ ಕೆಲಸವಲ್ಲ. ಅದನ್ನೂ ನಿರ್ದೇಶಕರು ಚೆನ್ನಾಗಿಯೇ ಮಾಡಿದ್ದಾರೆ. ಹವ್ಯಾಸಿಗಳು ನಿರ್ದೇಶನದ ಚೌಕಟ್ಟಿನಲ್ಲಿ ಕೆಲಸ ಮಾಡಿದ್ದರಿಂದ ಒಟ್ಟು ಪ್ರದರ್ಶನ ಚೆನ್ನಾಗಿಯೇ ಮೂಡಿ ಬಂತು. ತಿಮ್ಮರಾಯ, ಕೃಷ್ಣದೇವರಾಯ ಮತ್ತು ಚಿನ್ನಾದೇವಿ ಮೂರು ಪಾತ್ರಗಳ ಪ್ರಸ್ತುತಿಯಲ್ಲಿ ಪಕ್ವತೆ ಇತ್ತು. ಇಷ್ಟಿದ್ದೂ ಪ್ರದರ್ಶನದ ಪ್ರಾರಂಭದಲ್ಲಿ ಸುಮಾರು ಮುನ್ನೂರಕ್ಕಿಂತಲೂ ಹೆಚ್ಚಿದ್ದ ಪ್ರೇಕ್ಷಕರ ಸಂಖ್ಯೆ ಪ್ರಸಂಗದ ಕೊನೆಗೆ ಕೇವಲ ಮೂವತ್ತರ ಹತ್ತಿರ ಇಳಿದಿತ್ತು! ಕಾಲಮಿತಿಯ ಮತ್ತು ನಿರ್ದೇಶನದ ಚೌಕಟ್ಟಿನಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನಗಳು ಕೂಡಾ ಪ್ರೇಕ್ಷಕರನ್ನು ಯಾಕೆ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅವಲೋಕಿಸಬೇಕು

ಯಾವ ವಿಷಯಗಳು ಪ್ರೇಕ್ಷಕರನ್ನು ಪ್ರದರ್ಶನದಿಂದ ವಿಮುಖಗೊಳಿಸುತ್ತವೆ ಎಂದು ವಿಶ್ಲೇಷಿಸಿದಾಗ ನನಗನಿಸಿದ ಅಂಶಗಳನ್ನು ಮುಂದಿಡುತ್ತಿದ್ದೇನೆ.
ಪ್ರಸಂಗ ಪ್ರಸ್ತುತಿಯಲ್ಲಿ ಯಾವುದೋ ಒಂದು ರಸದ ಪ್ರಸ್ತುತಿ ಅಗತ್ಯಕ್ಕಿಂತ ಹೆಚ್ಚಾದಾಗ ಪ್ರದರ್ಶನ ನೀರಸ ಅನಿಸುತ್ತದೆ. ಪ್ರದರ್ಶನದಲ್ಲಿ ಕೃಷ್ಣದೇವರಾಯ ಮತ್ತು ಚಿನ್ನಾದೇವಿಯ ಶೃಂಗಾರದ ಪ್ರಸ್ತುತಿ ಅತಿಯಾಯಿತು. ಮೂರುವರೆ ಗಂಟೆಯ ಪ್ರದರ್ಶನದಲ್ಲಿ ಸುಮಾರು ಒಂದು ಗಂಟೆ ಶೃಂಗಾರದಲ್ಲಿಯೇ ಹೋಯಿತು. ಶೃಂಗಾರಕ್ಕೆ ಬೇಕಾದಷ್ಟು ವಿಷಯವಿದ್ದರೆ ಒಪ್ಪಬಹುದು. ಆದರೆ ಅನಗತ್ಯ ಎಳೆದೂ ಎಳೆದೂ ಶೃಂಗಾರ ತೋರಿಸಲು ಪ್ರಾರಂಭಿಸಿದ ತಕ್ಷಣ ಪ್ರೇಕ್ಷಕರು ಎದ್ದು ಹೋಗಲು ಆರಂಭಿಸಿದರು
ಇನ್ನು ವೃತ್ತಿಕಲಾವಿದರಲ್ಲಿ ಒಂದು ಚಾಳಿಯಾಗಿ ಬೆಳೆದಿರುವ ಅನಗತ್ಯ ಕಸರತ್ತಿನ ಪ್ರದರ್ಶನವನ್ನು ಹವ್ಯಾಸಿಗಳು ಎರವಲು ಪಡೆದದ್ದು ಸರಿಕಾಣಲಿಲ್ಲ. ಯಕ್ಷಗಾನಕ್ಕೆ ಕಸರತ್ತಿನ ಅವಶ್ಯಕತೆ ಇಲ್ಲ. ಪಾತ್ರಕ್ಕೆ ಮತ್ತು ಸಂದರ್ಭಕ್ಕೆ ತಕ್ಕುದಾದ ಭಾವಾಭಿವ್ಯಕ್ತಿ ಮುಖ್ಯ. ಧಡ ಧಡ ಧಡ ಕುಣಿದರೆ ವೇಷ ಚಂದ ಆಯಿತು ಎಂದು ನಮ್ಮ ಹಲವು ಕಲಾವಿದರು ತಿಳಿದುಕೊಂಡಂತಿದೆ (ವೃತ್ತಿಕಲಾವಿದರನ್ನೂ ಸೇರಿಸಿ). ಹಾಗಾಗಿ ನಯ ನಾಜೂಕು ವೈಯ್ಯಾರ ಮುಂತಾದ ನಡೆಗಳನ್ನೆಲ್ಲಾ ಅದು ತಿಂದುಹಾಕಿದೆ. ಇಲ್ಲೂ ಕೃಷ್ಣದೇವರಾಯ ಮತ್ತು ಚಿನ್ನಾದೇವಿಯ ಶೃಂಗಾರ ಪದ್ಯಗಳಲ್ಲಿ ಅನಗತ್ಯ ಕಸರತ್ತುಗಳನ್ನು ಅಳವಡಿಸಿ ಚಂದಕೆಟ್ಟಿತು. ಇದು ಕಥೆಯ ವೇಗಕ್ಕೂ ತಡೆಯೊಡ್ಡಿತು

ಚಿನ್ನಾದೇವಿಯ ಪ್ರವೇಶ ಹಂಪಿಯ ವಿರೂಪಾಕ್ಷನ ಸ್ತುತಿಯಿಂದ ಆರಂಭವಾಗುತ್ತದೆ. ಅದು ಭಕ್ತಿ ರಸ ಆಧಾರಿತವಾದ ಪದ್ಯ. ಆದರೆ ಪದ್ಯದ ಅಭಿನಯದಲ್ಲಿ ಭಕ್ತಿ, ಶೃಂಗಾರ, ವೀರ ಮತ್ತು ರೌದ್ರ ರಸಗಳನ್ನೆಲ್ಲಾ ತುರುಕಿಸಿ ಒಟ್ಟು ಕಲಸುಮೇಲೊಗರ ಆಯಿತುಕಲಾವಿದರು ಪ್ರಸಂಗದ ನಡೆ ಮತ್ತು ಪದ್ಯದ ಭಾವಾರ್ಥವನ್ನು ಅಭಿನಯಿಸುವ ಬದಲು ಪ್ರತಿ ಶಬ್ದಾರ್ಥಕ್ಕೂ ಅಭಿನಯ ಮಾಡಲು ಹೊರಟದ್ದೇ ಇದಕ್ಕೆ ಕಾರಣ. ಭಕ್ತಿ ರಸದಲ್ಲೇ ಅಭಿನಯ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಸಮಸ್ಯೆ ಹವ್ಯಾಸಿಗಳಲ್ಲಷ್ಟೇ ಅಲ್ಲ ವೃತ್ತಿಪರರಲ್ಲೂ ಇದೆ. ಅಭಿನಯದ ಉದ್ದೇಶ ಪದ್ಯದ ಒಟ್ಟು ಅರ್ಥವನ್ನು ಪ್ರಸ್ತುತಪಡಿಸುವುದು ಮತ್ತು ಕಥೆಯನ್ನು ತಿಳಿಯಪಡಿಸುವುದೇ ಹೊರತು ಪ್ರತಿ ಶಬ್ದಕ್ಕೂ ಅಭಿನಯ ತನಗೆ ಗೊತ್ತೆಂದು ತೋರಿಸುವುದಲ್ಲವಲ್ಲಾ
ಉದಾಹರಣೆಗೆ ಕೃಷ್ಣದೇವರಾಯ ಚಿನ್ನಾದೇವಿಯಲ್ಲಿ ಮದುವೆಯ ಪ್ರಸ್ತಾಪ ಇಡುವ ಪದ್ಯದಲ್ಲಿ "ನನ್ನ ಬಾಳಿನ ಹಣತೆಯಾಗುವೆಯಾ" ಎಂಬ ಸಾಲಿದೆ. ಅದಕ್ಕೆ ಹಣತೆಯ ಅಭಿನಯವನ್ನು ನಾಲ್ಕೈದು ರೀತಿಯಲ್ಲಿ ಮಾಡಿ ತೋರಿಸಿದರು. ಅಲ್ಲಿನ ಭಾವಾರ್ಥಕ್ಕೂ ಹಣತೆಯ ಅಭಿನಯಕ್ಕೂ ಎಲ್ಲಿಯ ಸಂಬಂಧ. ಇದು ವೃತ್ತಿಕಲಾವಿದರ ಅನುಕರಣೆಯಿಂದಾಗುವ ತೊಂದರೆ

ಇನ್ನು ಕಲಾವಿದರು ಸೂಕ್ಷ್ಮಗಳಿಗೆ ಗಮನಕೊಡಬೇಕು. ಕುಸುರಿ ಕೆಲಸದಿಂದಲೇ ಮೂರ್ತಿಯ ಸೌಂದರ್ಯ ಹೆಚ್ಚಿದಂತೆ ಸೂಕ್ಷ್ಮ ಮತ್ತು ನಾಜೂಕಿನ ಅಭಿನಯದಿಂದಷ್ಟೇ ಪ್ರದರ್ಶನದ ಸೊಗಡು ಹೆಚ್ಚಲು ಸಾಧ್ಯ. ಪಾತ್ರ ಪ್ರೇಕ್ಷಕನ ಹೃದಯವನ್ನು ಮುಟ್ಟಲು ಇದು ಅತ್ಯಾವಶ್ಯಕ. ಚಿನ್ನಾದೇವಿಯನ್ನು ಕಳ್ಳರಿಬ್ಬರಿಂದ ಕೃಷ್ಣದೇವರಾಯ ರಕ್ಷಿಸಿದ ಸಂದರ್ಭದ ಚಿತ್ರಣವನ್ನು ಉದಾಹರಣೆಯಾಗಿ ಗಮನಿಸಿದರೆ, ಅದು ಆಕೆಗೆ ಅವನ ಮೊದಲ ಭೇಟಿ. ಅಪರಿಚಿತನೊಬ್ಬ ತನ್ನನ್ನು ರಕ್ಷಿಸಿದಾಗ ಕೃತಜ್ಞತೆ ಹೇಳಲು ಕೈಜೋಡಿಸಿ ನಮಸ್ಕರಿಸುವುದು ಮನುಷ್ಯ ಸಹಜವಾದ ನಡೆ. ಅದನ್ನು ಮಾಡದೇ, ಧನ್ಯವಾದ ಹೇಳದೆ ಪ್ರಥಮ ನೋಟದ ಪ್ರೇಮಕ್ಕೆ ಹಾರಿದ್ದು ಸ್ವಲ್ಪ ಆಭಾಸ ಅನಿಸಿತು. ಇಂತಹ ಸೂಕ್ಷ್ಮಗಳಿಗೆ ಗಮನ ಹರಿಸಿ ಪ್ರದರ್ಶನದ ಗುಣಮಟ್ಟವನ್ನು ಇನ್ನೂ ಹೆಚ್ಚಿಸಬಹುದಿತ್ತು

ಕೊನೆಯದಾಗಿ ಸಮಯಪಾಲನೆ ತುಂಬಾ ಮುಖ್ಯ. ಪ್ರಕಟಿಸಿದ ಸಮಯಕ್ಕೆ ಸರಿಯಾಗಿ ಪ್ರದರ್ಶನ ಆರಂಭಿಸಬೇಕು. ಸಭೆ ತುಂಬಲು ಕಾಯಬಾರದು. ಸಭಾಲಕ್ಷಣದ ಕಲಾವಿದರು ಇನ್ನೂ ಕಲಿಯುತ್ತಿರುವವರು ಮತ್ತು ಅವರ ಮುಖ್ಯ ಉದ್ದೇಶ ಕಲಿಕೆ. ಹಾಗಾಗಿ ಸಭೆ ತುಂಬಿರದಿದ್ದರೂ ಪ್ರದರ್ಶನ ಪ್ರಾರಂಭಿಸಲು ಅಡ್ಡಿ ಇಲ್ಲ. ಸಮಯಕ್ಕೆ ಸರಿಯಾಗಿ ಬಾರದಿದ್ದರೆ ಒಂದಷ್ಟು ಭಾಗ ಕಳಕೊಳ್ಳುತ್ತೇವೆ ಅಂತ ಒಂದೆರಡು ಸಲ ಅನುಭವ ಆದ ಮೇಲೆ ಪ್ರೇಕ್ಷಕರೂ ಸಮಯಕ್ಕೆ ಬರಲು ಪ್ರಾರಂಭಿಸುತ್ತಾರೆ. ಹಾಗೆಯೇ ಸಮಯಕ್ಕೆ ಸರಿಯಾಗಿಮುಗಿಸುವುದೂ ಅಗತ್ಯ. ಅನಗತ್ಯ ವಿಷಯಗಳಿಗೆ ಕತ್ತರಿ ಹಾಕಿದರೆ ಇದು ಸಾಧ್ಯ. ನಿರ್ದೇಶಕ ಸಮರ್ಥನಾಗಿದ್ದರೆ ದೊಡ್ಡ ಪ್ರಸಂಗಗಳನ್ನೂ ಕೂಡಾ ಅರ್ಧ ಗಂಟೆಗೆ ಅಳವಡಿಸಲು ಸಾಧ್ಯವಿದೆ. (ಅಂತಹ ಒಂದು ಪ್ರದರ್ಶನದಲ್ಲಿ ವೇಷ ಮಾಡಿದ ಅನುಭವದಲ್ಲಿ ಹೇಳುತ್ತಿದ್ದೇನೆ). ಹಾಗಾಗಿ ಮೂರು ಗಂಟೆಯ ಕಾಲಮಿತಿಯಲ್ಲಿ ಪ್ರದರ್ಶನ ಮಾಡುವುದು ಒಂದು ಸಮಸ್ಯೆ ಅಲ್ಲ

ನನ್ನ ದೃಷ್ಟಿಯಲ್ಲಿ ಗುಣಮಟ್ಟದ ಯಕ್ಷಗಾನವನ್ನು ಉಳಿಸುವ ಸಾಮರ್ಥ್ಯ ಇರುವುದು ಹವ್ಯಾಸಿಗಳಿಗೆ. ಯಾಕೆಂದರೆ ವೃತ್ತಿಕಲಾವಿದರು ನಿರ್ದೇಶನದ ಚೌಕಟ್ಟಿನಲ್ಲಿ ಕೆಲಸ ಮಾಡುವುದಿಲ್ಲ ಮತ್ತು ಪ್ರತಿಯೊಬ್ಬರೂ ತನ್ನ ಪಾತ್ರವನ್ನು ಮೆರೆಸಲು ಹೋಗುತ್ತಾರೆ. ಹೀಗಾಗಿ ಅಲ್ಲಿ ಎಲ್ಲವೂ ಅತಿಯಾಗುತ್ತದೆ ಮತ್ತು ಕಾಲಮಿತಿಯಲ್ಲಿ ಪ್ರದರ್ಶನ ಮುಗಿಯುವುದಿಲ್ಲ.

ಹವ್ಯಾಸಿ ತಂಡಗಳಿಂದ ನಿರ್ದೇಶನದ ಚೌಕಟ್ಟಿನಲ್ಲಿ ಪ್ರದರ್ಶನ ಮಾಡಿಸಲು ಸಾಧ್ಯ; ಇದಕ್ಕೆ ನಿರ್ದೇಶಕರು ತುಂಬಾ ನಿಗಾವಹಿಸಿ ಕೆಲಸ ಮಾಡಬೇಕು. ಪ್ರತಿ ಪಾತ್ರಕ್ಕೂ ಅದರ ಔಚಿತ್ಯಕ್ಕೆ ತಕ್ಕ ಅವಕಾಶ ನೀಡಿ, ಯಾವುದೇ ಪಾತ್ರವನ್ನು ಅಗತ್ಯಕ್ಕಿಂತ ಹೆಚ್ಚು ಮೆರೆಸದೆ, ಯಾವ ರಸದ ಪ್ರಸ್ತುತಿಯೂ ಅತಿಯಾಗದಂತೆ ನೋಡಿಕೊಂಡು, ಕಥೆಯ ಹರಿವಿಗೆ ತಡೆಯಾಗದಂತೆ, ಸಂದರ್ಭಕ್ಕೆ ತಕ್ಕಂತೆ ಸಹಜ ಅಭಿನಯ ನೀಡುವುದರ ಜೊತೆಗೆ ಸಮಯಪಾಲನೆ ಮಾಡುವುದರಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯ.

ಸಮೀರ ಸಿ ದಾಮ್ಲೆ






Saturday, May 12, 2018

***ಮತದಾನ ಮಾಡಿ***


ನನಗೆ ಓಟ್ ಇರುವುದು ನನ್ನ ಊರಿನಲ್ಲಿ. ಈ ವರ್ಷ ಬೂತ್ ನಾವೇ ನಡೆಸುತ್ತಿರುವ ಶಾಲೆಯಲ್ಲಿ; ನಮ್ಮ ಮನೆ ಮತ್ತು ಶಾಲೆ ಅಕ್ಕ ಪಕ್ಕ.
ಏಳು ಗಂಟೆಗೇ ಮತ ಹಾಕಲೆಂದು ಹೋದರೆ ಆಗಲೇ ದೊಡ್ಡ ಸರತಿ ಸಾಲು!
ದಿನಕೂಲಿ ಮಾಡುವವರು, ಖಾಸಗಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು, ಗ್ಯಾರೇಜ್, ವರ್ಕಶಾಪ್ ನಲ್ಲಿ ಕೆಲಸ ಮಾಡುವವರು, ಅಂಗಡಿ ನಡೆಸುವವರು ಮುಂತಾಗಿ ಈ ದಿನ ರಜೆ ಇಲ್ಲದವರು 6.45~7 ಗಂಟೆಗೇ ಬಂದು ಕ್ಯೂ ನಿಂತು ಮತ ಚಲಾವಣೆ ಮಾಡುತ್ತಿದ್ದಾರೆ. ಬೇಗ ಮತದಾನ ಮುಗಿಸಿ ಕೆಲಸಕ್ಕೆ ಹೋಗುವ ಆತುರ ಅವರಿಗೆ.
ಸದ್ಯಕ್ಕಂತೂ ಕಡಿಮೆ ಸಂಖ್ಯೆಯಲ್ಲಿ ಕಾಣುವವರು ಸುಶಿಕ್ಷಿತರು. ಸರಕಾರ ಮತದಾನದ ದಿವಸ ರಜೆ ಘೋಷಿಸುತ್ತದೆ. ಬಹುರಾಷ್ಟ್ರೀಯ (MNC) ಕಂಪನಿಗಳಿಗೆ ರಜೆ ಇರುತ್ತದೆ. ರಜೆ ಇರುವ ಮೇಲ್ವರ್ಗ (upper class) ಮತ್ತು ಮೇಲ್ಮಧ್ಯಮ ವರ್ಗ (upper middle class) ಮತದಾನ ಮಾಡಲು ಉದಾಸೀನ ಮಾಡುವುದೇ ಹೆಚ್ಚು. ಚುನಾವಣಾ ಪ್ರಚಾರದಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಬಡ ಹಾಗೂ ಕೆಳ ಮಧ್ಯಮ ವರ್ಗಕ್ಕೆ ಕೇಂದ್ರೀಕೃತವಾಗಿರುವುದೂ ಅದೇ ಕಾರಣಕ್ಕೆ.
ಮೇಲ್ವರ್ಗ ಮತ್ತು ಮೇಲ್ಮಧ್ಯಮ ವರ್ಗದ ಹೆಚ್ಚಿನ ಜನ ಸುಮ್ಮನೇ ಕುಳಿತು ಮಾತನಾಡುತ್ತಾರೆಯೇ ಹೊರತು ಮತದಾನ ಮಾಡುವುದಿಲ್ಲ ಎಂಬುದು ರಾಜಕೀಯ ಪಕ್ಷಗಳಿಗೆ ಚೆನ್ನಾಗಿ ತಿಳಿದಿದೆ.
ನಾನು ಸುಮಾರು ಹದಿನೈದು ದೇಶಗಳನ್ನು ನೋಡಿದ್ದೇನೆ. 1945~50 ರ ಆಸುಪಾಸಿನಲ್ಲಿ ನೆಲಸಮವಾಗಿದ್ದ ದೇಶಗಳು ಇವತ್ತು ಕಂಡಿರುವ ಅಭಿವೃದ್ಧಿಯನ್ನು ನೋಡಿದರೆ ನಾವಿನ್ನೂ ತುಂಬಾ ಹಿಂದಿದ್ದೇವೆ. ದೂರದೃಷ್ಟಿ ಇರುವ ಸರಕಾರಗಳು ಮತ್ತು ಇಚ್ಛಾಶಕ್ತಿ ಇರುವ ನಾಯಕರು ಬರದೇ ಇದ್ದದ್ದೇ ಇದಕ್ಕೆ ಕಾರಣ ಎಂಬುದು ನನ್ನ ಅನಿಸಿಕೆ. ಕೆಳ ವರ್ಗದ ಜನರನ್ನು ಆಮಿಷಕ್ಕೊಳಪಡಿಸಿ ಮತ ತಿರುಗಿಸುತ್ತಾರೆ ಎಂಬುದು ನಗ್ನ ಸತ್ಯ!
ಸುಶಿಕ್ಷಿತ ವರ್ಗ ಜಡ ಬಿಟ್ಟು ಮತದಾನ ಮಾಡದೆಯೇ, ಸರಿಯಾದ ದೂರದೃಷ್ಟಿ ಇರುವ ಅಭ್ಯರ್ಥಿಗಳನ್ನು ಆರಿಸದೆಯೇ ನಮ್ಮ ದೇಶದ ಪ್ರಗತಿ ಕುಂಟುತ್ತಾ ಸಾಗಿರುವುದು.
ಮತ ಹಾಕದೇ complaint ಮಾಡುವ ಜನರಲ್ಲಿ ಮತ ಹಾಕಿ ಎಂಬುದು ನನ್ನ ಕೋರಿಕೆ.
ಮತದಾನ ಮಾಡಿ ದೇಶ ಬದಲಿಸಿ.

Sunday, December 6, 2015

How to separate rotten apple?

What is the biggest headache that the world is facing today? Certainly the most spoken is terrorism! Of course we have several other issues like education, poverty, environmental changes and many more. However the focus today has been terrorism. Terrorism has grown to an extent that it has superseded all other issues.

We have ‘act of terror’ being discussed almost every day in media & social media. Except few rich countries of Middle East like Dubai, Abu Dhabi probably there is no country in this world which is not affected by terrorism.

There is no more clarification or confirmation required to the fact that Pakistan & Afghanistan are the places where terrorism is grown! It is also an established fact today that the funding that Pakistan & Afghanistan received from US was utilized to grow terrorism. There is no doubt that the ISIS is Syria, Iraq & in the neighbouring countries is the biggest terrorist group today. Also no more evidence is required to the fact that all the acts of terror today are executed by radical Islamist groups.
Well, now we know where it originated, where it has the strong base, who funded, what is the motive etc. It should be easy to destroy them right? Well known Canadian writer, publisher Mr. Tarek Fatah says ‘destroy Pakistan; that is THE solution to put an end to terrorism’. I tend to disagree with him! Radicalisation by Islamic terrorists has reached to an extent that, today it is really difficult to identify who is radicalised & who is not. Let us take the recent case of shooting in California. The family of Syed Rizwan Farook and his wife Tashfeen Malik say that they are in shock; they had no clue that Syed & Tashfeen could do this.

I also have many Muslim friends. All my neighbours in my hometown are Muslims. We are so friendly, cooperative and share so many things and I dont find a trace of radicalisation in them. I am sure that this is the experience with rest of non-Muslims. It is only when one such person of our acquaintance is being taken in custody for terror links we get to know that he/she had such a link! The radicalization is going on via all kind of medium that is possible. We are unable to trace all of them in spite of having all modern technology! And every time it is an act by Radical Islamic group!

How do we identify every person who is being radicalised, how do we identify that person who could be a threat to our society? How do we identify those rotten apples from the basket in which every apple looks perfect from outside? 


ಇಂದು ಚೆನ್ನೈ ನಾಳೆ ಮಿಕ್ಕುಳಿದವೈ!

ನಿನ್ನೆ ಟ್ವೀಟರ್ ನೋಡುತ್ತಿದ್ದೆ, ಒಂದು ಟ್ವೀಟ್ ಬಹಳ ಇಷ್ಟವಾಯಿತು. ಪ್ರತೇಶ್ ಎಂಬವರ ಆ ಟ್ವೀಟ್ ಹೀಗಿತ್ತು - "The great thing about democracy is that it gives every voter a chance to do something stupid" ಅಂದರೆ ’ಪ್ರಜಾಪ್ರಭುತ್ವದ ವಿಶಿಷ್ಟತೆ ಏನೆಂದರೆ ಅದು ಪ್ರತಿಯೊಬ್ಬ ಮತದಾರನಿಗೂ ಒಂದು ಮೂರ್ಖತನದ ಕೆಲಸ ಮಾಡಲು ಅವಕಾಶ ಕೊಡುತ್ತದೆ’.  ಎಷ್ಟೊಂದು ಸತ್ಯದ ಮಾತು! ನಾವು ನಮ್ಮ ರಾಜಕಾರಣಿಗಳತ್ತ ಬೊಟ್ಟು ಮಾಡಿ ಹೇಳುತ್ತಿರುತ್ತೇವೆ - ’ನಮ್ಮನ್ನು ಮೂರ್ಖರನ್ನಾಗಿಸಿದರು, ನಮಗೆ ಮೋಸಮಾಡಿದರು’ ಎಂಬ ಹಾಗೆ. ಆದರೆ ನಿಜವಾಗಿ ನೋಡಿದರೆ ನಾವು ಮತ್ತೆ ಮತ್ತೆ ಮೂರ್ಖತನದ ಕೆಲಸ ಮಾಡುತ್ತಾ ಬರುತ್ತಿದ್ದೇವೆ. ನಾವು ತಿಳಿದೂ ತಿಳಿದೂ ಮೋಸಹೋಗುತ್ತಿದ್ದೇವೆ. ಹಾಗಾಗಿಯೇ ನಮ್ಮ ಹಳ್ಳಿಗಳು ಉದ್ಧಾರವಾಗುತ್ತಿಲ್ಲ, ನಗರಗಳೂ ಉದ್ಧಾರವಾಗುತ್ತಿಲ್ಲ!

ಚೆನ್ನೈಯಲ್ಲಿ ಕಳೆದೆರಡು ದಿವಸಗಳಿಂದ ಆಗುತ್ತಿರುವ ಜಲಪ್ರಳಯವನ್ನೇ ನೋಡಿ. ಚೆನ್ನೈ ಮುಖ್ಯಮಂತ್ರಿ ಜಯಲಲಿತಾ ಹೇಳುತ್ತಾರೆ - "ಭಾರೀ ಮಳೆಯಾದಾಗ ನಷ್ಟಗಳಾಗುವುದು ಸ್ವಾಭಾವಿಕ, ತ್ವರಿತ ಕಾರ್ಯಾಚರಣೆ ಮಾತ್ರವೇ ಸರಕಾರದ ಕಾರ್ಯಕ್ಷಮತೆಯ ಮಾನದಂಡ" ಎಂದು. ಅಂದರೆ ಇವರು ಈ ಪರಿಸ್ಥಿತಿಗೆ ಯಾವುದೇ ರೀತಿಯ ನೈತಿಕ ಹೊಣೆಗಾರಿಕೆ ಹೊರಲು ತಯಾರಿಲ್ಲ. ಹೌದು ಚೆನ್ನೈಯಲ್ಲಿ ವಿಪರೀತ ಮಳೆಯಾಗಿದೆ, ಮಳೆ ಬೀಳುತ್ತಲೇ ಇದೆ. ಹವಾಮಾನ ವರದಿಯ ಪ್ರಕಾರ ಇನ್ನೂ ಎಪ್ಪತೆರಡು ಗಂಟೆ ಮಳೆ ಬೀಳುತ್ತಲೇ ಇರುತ್ತದೆ. ಆದರೆ ಬಿದ್ದ ನೀರು ಎಲ್ಲೂ ಹರಿದು ಹೋಗುವುದಿಲ್ಲ. ನೀರಿನ ಮಟ್ಟ ಏರುತ್ತಲೇ ಹೋಗುತ್ತದೆ. ಯಾಕೆ ಹೀಗೆ?

ನಾನು ಚೆನ್ನೈಗೆ ಬಹಳಷ್ಟು ಸಲ ಹೋಗಿದ್ದೇನೆ. ಸುಮಾರು ಐದು ವರ್ಷಗಳ ಕಾಲ ತಿಂಗಳಲ್ಲಿ ನಾಲ್ಕೈದು ದಿನ ಚೆನ್ನೈಯಲ್ಲೇ ಕಳೆಯುತ್ತಿದ್ದೆ. ಒಂದು ಸಣ್ಣ ಮಳೆ ಬಂದರೆ ಸಾಕು ರಸ್ತೆಯ ತುಂಬೆಲ್ಲಾ ನೀರು, ಟ್ರಾಫಿಕ್ ಜಾಮ್. ದೊಡ್ಡ ಮಳೆ ಬಂದರೆ ಒಂದಷ್ಟು ಪ್ರದೇಶಗಳು ಜಲಾವ್ರತ. ಚೆನ್ನೈಯಲ್ಲಿ ಹಲವು ವರ್ಷಗಳಿಂದ ವಾಸವಿರುವ ಮಿತ್ರನೊಬ್ಬ ಹೇಳುತ್ತಿರುತ್ತಾನೆ - "ಒಂದು ಅರ್ಧ ಗಂಟೆ ಮಳೆ ಬಂದರೆ ಅಪಾರ್ಟ್‌ಮೆಂಟ್ ಎದುರು ಸೊಂಟದವರೆಗೆ ನೀರು ತುಂಬುತ್ತದೆ. ಕೆರೆಯಲ್ಲಿ ನಡೆದಂತೆ ಆ ಕೊಳಚೆ ನೀರಿನಲ್ಲಿ ನಡೆದುಕೊಂಡೇ ಮನೆ ಸೇರಬೇಕು. ಮನೆ ಸೇರಿದರೆ ಮನೆಯೊಳಗೆ ಕರೆಂಟು, ನೀರು ಎರಡೂ ಇರುವುದಿಲ್ಲ. ಮನೆಯೆಲ್ಲಾ ಜಲಾವ್ರತ ಕುಡಿಯುವುದಕ್ಕೆ ಒಂದು ಹನಿ ನೀರಿಲ್ಲ. ಸಂಸಾರ ಸಮೇತ ಇದ್ದರೆ ಮನೆಯವರಾದರೂ ಸ್ವಲ್ಪ ನೀರು ಎತ್ತಿಡುತ್ತಾರೆ, ಬ್ಯಾಚುಲರ್ ಹುಡುಗರಿಗೆ ನೀರು ಕರೆಂಟ್ ಇಲ್ಲದ ರಾತ್ರಿಯೇ ಖಾತ್ರಿ" ಎಂಬಹಾಗೆ. ಇದು ಅರ್ಧ - ಒಂದು ಗಂಟೆಯ ಮಳೆಯ ಕಥೆ. ಇನ್ನು ಇಪ್ಪತ್ತನಾಲ್ಕು ಗಂಟೆ ಮಳೆ ಬಂದರೆ ಏನಾದೀತು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಕೊಂಚವೂ ನಿಯಂತ್ರಣ ಇಲ್ಲದೆ ಹಿಗ್ಗಾಮುಗ್ಗಾ ಕಾಂಕ್ರೀಟೀಕರಣ ಮಾಡಿರುವುದರ ಪ್ರಭಾವ ಇದು. ಕಾಂಕ್ರೀಟೀಕರಣ ಹೇಗೆ ನಡೆದಿದೆ ಎಂದರೆ ನೀರಿಗೆ ಇಂಗುವುದಕ್ಕೆ ಜಾಗವೇ ಇಲ್ಲ. ಇನ್ನು ಒಳಚರಂಡಿಯ ವ್ಯವಸ್ಥೆಗಳಂತೂ ಇಲ್ಲವೇ ಇಲ್ಲ! ಇದು ಚೆನ್ನೈ ಮಹಾನಗರವೊಂದರ ಕಥೆಯಲ್ಲ! ನಮ್ಮ ಬೆಂಗಳೂರಿನಲ್ಲೂ ಇದೇ ಕಥೆ. ಮುಂಬೈ, ದೆಹಲಿ ಮುಂತಾದ ಮಹಾನಗರಗಳಲ್ಲೂ ಇದೇ ಕಥೆ. ನಮ್ಮ ಹಳ್ಳಿಗಳಲ್ಲಿ ಹತ್ತು ಸೆಂಟಿಮೀಟರ್ ಮಳೆಯಾದರೆ ’ಹಾ’ ಎನಿಸುತ್ತದೆ. ಅದೇ ಒಂದು ಮಹಾನಗರಲ್ಲಿ ಹತ್ತು ಸೆಂಟಿಮೀಟರ್ ಮಳೆ ಬಂದರೆ ’ಹಾಯ್ ಹಾಯ್’ ಎಂದು ಭಯದ ವಾತಾವರಣ ಸೃಷ್ಟಿಯಾಗುತ್ತದೆ.

ನಮ್ಮ ದೇಶದಲ್ಲಿ ನಗರಾಭಿವೃದ್ಧಿ ಸಚಿವರ ಖಾತೆ ಸಿಗುವುದು ಅದೃಷ್ಟದ ವಿಷಯವಾಗಿದೆ. ಒಂದಷ್ಟು ಕೆರೆಗಳನ್ನು ಮುಚ್ಚಿ, ಒಂದಷ್ಟು ಸರಕಾರೀ ಜಮೀನನ್ನು ಒತ್ತುವರಿ ಮಾಡಿ, ಒಂದಷ್ಟು ಹೊಲಗಳನ್ನು ಒತ್ತುವರಿ ಮಾಡಿ ಲೇಔಟ್‌ಗಳನ್ನಾಗಿ ಪರಿವರ್ತಿಸುವುದು. ಹೀಗೆ ಲೇಔಟ್ ಮಾಡುವ ಮೊದಲೇ ಸುತ್ತಮುತ್ತಲಿನ ಒಂದಷ್ಟು ಎಕರೆ ತಮ್ಮ ಹೆಸರಿಗೆ ಮಾಡಿಕೊಳ್ಳುವುದು. ನೋಟಿಫೈ, ಡೀನೋಟಿಫೈ ಇತ್ಯಾದಿ ಆಟಗಳಾಡಿ ಕೋಟಿ ಕೋಟಿ ಎಣಿಸುವುದು. ಒಬ್ಬ ನಗರಾಭಿವೃದ್ಧಿ ಸಚಿವನಿಗೂ ನಗರೀಕರಣದ ಕಲ್ಪನೆಯೇ ಇರುವಂತಿಲ್ಲ. ನಗರಾಭಿವೃದ್ಧಿ ಅಂದರೆ ಲೇಔಟ್ ಮಾಡುವದು, ಅಪಾರ್ಟ್‌ಮೆಂಟ್ ಕಟ್ಟುವುದು ಎಂದಷ್ಟೇ ತಲೆಯಲ್ಲಿದ್ದಂತಿದೆ. ಇಂತಹ ಸಚಿವರಿದ್ದರೆ ಭ್ರಷ್ಟ ಅಧಿಕಾರಿಗಳಿಗೆ ಹಬ್ಬ. ನಿಯತ್ತಿನ ಅಧಿಕಾರಿಗಳು ಮಾತನಾಡಿದರೆ ವರ್ಗಾವಣೆ ಆಗುತ್ತದೆ. ಅದಾಗಬಾರದೆಂದರೆ ಸುಮ್ಮನಿರಬೇಕು.

ಇನ್ನು ಮಹಾನಗರಗಳಲ್ಲಿ ವಾಸವಿರುವವರಲ್ಲಿ ಸುಮಾರು ೫೦% ಜನರು ವಲಸಿಗರು. ಅದ್ಯಾವುದೋ ದೂರದೂರಿನಿಂದ ಇನ್ನೊಂದು ರಾಜ್ಯದಿಂದ ಹೊಟ್ಟೆಪಾಡಿಗಾಗಿ ಬಂದು ನೆಲೆಸಿದವರು. ಅವರಲ್ಲಿ ಹೆಚ್ಚಿನವರಿಗೆ ಆ ಊರಿನ ಬಗ್ಗೆ, ಅಲ್ಲಿಯ ಭಾಷೆಯ ಬಗ್ಗೆ, ಅಲ್ಲಿನ ಸಂಸ್ಕೃತಿಯ ಬಗ್ಗೆ, ಸ್ಥಳೀಯ ರಾಜಕೀಯದ ಬಗ್ಗೆ ಆಸಕ್ತಿಯಾಗಲೀ ಗೌರವವಾಗಲೀ ಇರುವುದಿಲ್ಲ. ಅವರು ಏನಿದ್ದರೂ ಫೇಸ್‌ಬುಕ್ಕಿನಲ್ಲಿ, ಟ್ವೀಟರ್‌ನಲ್ಲಿ ಅವರಿಗೆ ನೆಲೆಕೊಟ್ಟ ಊರನ್ನು ಹಳಿಯುವು ಬಿಟ್ಟು ಬೇರೇನೂ ಮಾಡುವುದಿಲ್ಲ. ಕನಿಷ್ಟಪಕ್ಷ ಮತಚಲಾವಣೆ ಕೂಡಾ ಮಾಡುವುದಿಲ್ಲ. ಇನ್ನು ನಗರಗಳ ಅಭಿವೃದ್ಧಿ ಸರಿಯಾಗಿ ಆದರೇನು, ಆಗದಿದ್ದರೇನು? ಹೀಗಾಗಿಯೇ ತಮಗೆ ಸಿಕ್ಕ ನಾಲ್ಕೈದು ವರ್ಷದ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಣ ಮಾಡಿದರಾಯಿತು ಎಂಬ ಹಾಗೆ ರಾಜಕಾರಣಿಗಳು, ಅಧಿಕಾರಿಗಳು ನಡೆದುಕೊಳ್ಳುತ್ತಾರೆ. ಚೆನ್ನೈಯಲ್ಲಿ ಆದಂತಹ ದುರದೃಷ್ಟಕರ ಘಟನೆ ನಡೆದಾಗ ತಮ್ಮದೇನೂ ತಪ್ಪಿಲ್ಲ ಎಂಬ ಹೇಳಿಕೆ ಕೊಡುತ್ತಾರೆ. ಆಗ ನಾವು ’ನಮ್ಮನ್ನು ಮೂರ್ಖರನ್ನಾಗಿಸಿದರು’ ಎಂಬ ಹೇಳಿಕೆ ಕೊಡುತ್ತೇವೆ. ಇಂದು ಚೆನ್ನೈ, ನಾಳೆ ಇತರೇ ಮಹಾನಗರಗಳೂ ಹೀಗೇ ಮುಳುಗುವುದಿದೆ!

Wednesday, November 25, 2015

****ಇಂಟಾಲರೆನ್ಸ್ ನಾಟಕ**** ****Intolerance Drama****


****ಇಂಟಾಲರೆನ್ಸ್ ನಾಟಕ****

ದೃಷ್ಯ: ಕಿರಣ್ - ಅಮೀರ್ ಡೈನಿಂಗ್ ಟೇಬಲ್ ಎದುರು ಕುಳಿತಿದ್ದಾರೆ.

ಕಿರಣ್ - (ಅಸಮಧಾನದ ಧ್ವನಿಯಲ್ಲಿ) ಈಗೀಗ ನೀನು ತುಂಬಾ ಕೋಪ ಮಾಡ್ಕೋತೀಯಾ... ಸುಮ್-ಸುಮ್ನೆ ಸಿಟ್ಟಾಗ್ತೀಯ!

ಅಮೀರ್ - (ಮುಖ ಗಂಟಿಕ್ಕಿಕೊಂಡು) ಇಲ್ಲ... ಹಾಗೇನಿಲ್ಲ...

ಕಿರಣ್ - ನೋಡು ಈಗ್ಲೂ ಕೋಪ... ಮಕ್ಕಳಿಗೆ ಕೂಡಾ ನಿನ್ನಲ್ಲಿ ಮಾತಾಡೋಕೆ ಹೆದರಿಕೆ ಈಗೀಗ... ಏನು ಪ್ರಾಬ್ಲಮ್?

ಅಮೀರ್ - (ಒಂದು ನಿಟ್ಟುಸಿರು ಬಿಟ್ಟು) ಏನಿಲ್ಲಾ ಈ ಮೋದಿ ಸರ್ಕಾರ ಬಂದಮೇಲೆ ಯಾಕೋ ಮನಸ್ಸೇ ಸರಿ ಇಲ್ಲ. ನಂಗೆ ಟಾಲರೇಟ್ ಮಾಡಕ್ಕೆ ಆಗ್ತಿಲ್ಲ!

ಕಿರಣ್ - ನಿಂಗೇನೋ ಮೋದಿ ಆಗ್ದೆ ಇರಬಹುದು. ಆದ್ರೆ ಅವ್ರು ನಿಂಗೇನು ಮಾಡಿಲ್ಲ ತಾನೆ... ಹಿಂದೂ ದೇವರನ್ನು ಅಷ್ಟೆಲ್ಲಾ ಕೆಟ್ಟದಾಗಿ ತೋರ್ಸಿದ್ರೂ ಪಿ.ಕೆ. ಚೆನ್ನಾಗೇ ನಡೀತು ತಾನೆ?...

ಅಮೀರ್ - (ಮತ್ತೆ ಸಿಟ್ಟಾಗಿ) ಅದೇ... ನಾನು ಅದನ್ನ ಒಂದು ದೊಡ್ಡ ವಿಷ್ಯ ಮಾಡ್ತಾರೆ ಅಂದ್ಕೊಂಡಿದ್ದೆ.. ನಾನು ಒಂದಷ್ಟು ಇಂಟಾಲರೆನ್ಸ್ ಬಗ್ಗೆ ಕಮೆಂಟ್ ಕೊಡ್ಬೋದು ಅಂದ್ಕೊಂಡಿದ್ದೆ... ಬ್ಯಾನ್ ಮಾಡ್ತಾರೆ ಅಂದ್ಕೊಂಡೆ... ಬ್ಯಾನ್ ಹಾಕೋದು ಬಿಡು ಒಂದು ಮಾತೂ ಹೇಳಲೇ ಇಲ್ಲ...

ಕಿರಣ್ - ಸರಿ ಅದಕ್ಕೆ ನೀನು ಮನೆಯಲ್ಲಿ ಸಿಟ್ಟು ಮಾಡ್ಕೊಂಡ್ರೆ ನಡೆಯುತ್ತಾ? ಪಾಪ ಮಕ್ಕಳು ಹೆದರಿಕೊಂಡಿದ್ದಾರೆ ಗೊತ್ತಾ?
ನಿಂಗೆ ಕಮೆಂಟ್ ಮಾಡ್ಲೇ ಬೇಕು ಅಂದ್ರೆ ಸತ್ಯಮೇವ ಜಯತೇ ಪ್ರೋಗ್ರಾಮ್ ಇದ್ಯಲ್ಲಾ? ಅದ್ರಲ್ಲೇ ಏನಾದ್ರೂ ಕಮೆಂಟ್ ಮಾಡು...

ಅಮೀರ್ - (ಮುಖ ಕೆಂಪಾಗಿಸಿ, ಫುಲ್ ಗರಂ ಆಗಿ) ಈಗ ಅದಕ್ಕೂ ಕತ್ತರಿ ಬೀಳುತ್ತೆ ಅಂತ ಅನ್ನಿಸ್ತಾ ಇದೆ. ಈ ಸರ್ಕಾರ ಮೋದಿ ವಿಶನ್ ಪ್ರಕಾರ ಹೀಗೆ ಒಂದೊಂದೇ ಪ್ರಾಬ್ಲಮ್ ಸರಿ ಮಾಡ್ತಾ ಹೋದ್ರೆ ನಂಗೆ ಆ ಪ್ರೋಗ್ರಾಮ್‌ಗೂ ಟಾಪಿಕ್ ಸಿಗಲ್ಲ. ಏನ್ ಮಾಡೋದು? ಸಿನೆಮಾದಲ್ಲಿ ಯಾರ ಅದೃಷ್ಟ ಯಾವಾಗ ಕೈಕೊಡುತ್ತೆ ಗೊತ್ತಿಲ್ಲ. ಒಮ್ಮೆ ಟೈಮ್ ಕೆಟ್ಟರೆ ಅಡ್ವಟೈಸ‍ಮೆಂಟ್ ಕೂಡಾ ಸಿಗಲ್ಲ ಗೊತ್ತಲ್ಲ. ಇನ್ನು ಸತ್ಯಮೇವ ಜಯತೇ ನಿಂತ್ರೆ ದುಡ್ಡು ಎಲ್ಲಿಂದ ತರೋದು? ಮನೆ ಓಡ್ಸೋದು ಹೆಂಗೆ?

ಕಿರಣ್ - ನಂಗೆ ಅದೆಲ್ಲಾ ಗೊತ್ತಿಲ್ಲ. ನೀನು ನಿನ್ನ ಕರಿಯರ್ ಪ್ರಾಬ್ಲಮ್‌ನ ಮನೆಗೆ ತರೋದು ನಂಗೆ ಇಷ್ಟ ಆಗಲ್ಲ. ನಿಂಗೆ ಈಗೀಗ ತಾಳ್ಮೆನೇ ಇಲ್ಲ. ನಿನ್ನ ಕೋಪ ತಾಪ ನೋಡಿದ್ರೆ ನಂಗೆ ಭಯ ಆಗತ್ತೆ. ಈಗ ಏಳೆಂಟು ತಿಂಗಳಿಂದ ಇಲ್ಲಿ ಇಂಟಾಲರೆನ್ಸ್ ಜಾಸ್ತಿ ಆಗ್ತಾ ಇದೆ.  ನನ್ನ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಆಗಿದೆ. ನಂಗೆ ಅನ್ಸುತ್ತೆ ನೀನು ಒಂದು ಬ್ರೇಕ್ ತೆಗೋಬೇಕು. ನಾವು ಈ ಪಾಲಿಟಿಕ್ಸ್ ಎಲ್ಲಾ ಬಿಟ್ಟು ಎಲ್ಲಾದರು ವಿದೇಶಕ್ಕೆ ಒಂದಷ್ಟು ದಿನ ಹಾಲಿಡೇಗೆ ಹೋಗೋಣ,

ಅಮೀರ್ - (ಅಷ್ಟು ಹೊತ್ತು ಯಾವುದೋ ಲೋಕದಲ್ಲಿ ಇದ್ದಂತೆ) ಪುನಃ ಹೇಳು... ಏನಾಗ್ತಾ ಇದೆ. 

ಕಿರಣ್ - (ಕೋಪದಲ್ಲಿ) ಇಂಟಾಲರೆನ್ಸ್ ತುಂಬಾ ಜಾಸ್ತಿ ಆಗ್ತಾ ಇದೆ.  ನನ್ನ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಆಗ್ತದೆ. ಎಲ್ಲಾದ್ರೂ ವಿದೇಶಕ್ಕೆ ಹೋಗೋಣ. ಅರ್ಥ ಆಯ್ತಾ?

ಅಮೀರ್ - ಸಾಕು ಸಾಕು... ನಂಗೆ ಇದೇ ಬೇಕಿತ್ತು...

******(ತೆರೆ...)******


##################################################################
****Intolerance Drama****
Scene: Kiran & Amir are sitting at the dining table.
Kiran – (In grave voice) These days you get angry very often... For no reasons... Whats wrong?
Amir – (frowning) Nothing like that... I am fine...
Kiran – See, even now you are angry. Even kids are afraid to speak to you these days. Whats the matter?
Amir – (With a sigh) After this Modi government came into power I am disturbed. I cant tolerate this.
Kiran – You might not like Modi, might have differences with him, but what has his government done to you? In-spite of mocking Hindu gods PK did very well. Isn’t it?
Amir – (now again with angry face) I expected them to make PK a big issue. I was completely prepared to make comments on government about their intolerance. I expected that they would ban the movie... But no single comment...
Kiran – Ok.. I understand... But showing anger at home isn’t the solution right? Do you know, our kids are afraid to speak to you these days.
If you want to make comments on government use your Satyameva Jayate program. Bring up some issue there with which you can make comments on intolerance.
Amir – (Angry red face) I feel even that might come to an end. If this government addresses & solves issues with the vision of Modi I will not have any topic for that program. An artist can lose his star value anytime... If times are bad you dont even get endorsements... And then if Satyameva Jayate ends what do I do? Don’t we need money for our luxurious life?
Kiran – I don’t know what you are going to do. Don’t bring your career tension to home. I dont like it. You dont have patience these days. Intolerance is rising in the last 7-8 months. I am worried about the future of our children. I think you should take a break. Forget all these politics for some time. Lets go for a vacation outside India.  
Amir – (As if he wasn’t listening) Come again...
Kiran – (Shouting in anger) Intolerance is rising... I am worried about the future of our kids. Lets go somewhere outside India... Understood?
Amir – Enough... This is what I was looking for...
******End of the drama******


-ಸಮೀರ ದಾಮ್ಲೆ
-Sameera Damle

Photo Courtesy: http://www.santabanta.com/