ನನಗೆ ಓಟ್ ಇರುವುದು ನನ್ನ ಊರಿನಲ್ಲಿ. ಈ ವರ್ಷ ಬೂತ್ ನಾವೇ ನಡೆಸುತ್ತಿರುವ ಶಾಲೆಯಲ್ಲಿ; ನಮ್ಮ ಮನೆ ಮತ್ತು ಶಾಲೆ ಅಕ್ಕ ಪಕ್ಕ.
ಏಳು ಗಂಟೆಗೇ ಮತ ಹಾಕಲೆಂದು ಹೋದರೆ ಆಗಲೇ ದೊಡ್ಡ ಸರತಿ ಸಾಲು!
ದಿನಕೂಲಿ ಮಾಡುವವರು, ಖಾಸಗಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು, ಗ್ಯಾರೇಜ್, ವರ್ಕಶಾಪ್ ನಲ್ಲಿ ಕೆಲಸ ಮಾಡುವವರು, ಅಂಗಡಿ ನಡೆಸುವವರು ಮುಂತಾಗಿ ಈ ದಿನ ರಜೆ ಇಲ್ಲದವರು 6.45~7 ಗಂಟೆಗೇ ಬಂದು ಕ್ಯೂ ನಿಂತು ಮತ ಚಲಾವಣೆ ಮಾಡುತ್ತಿದ್ದಾರೆ. ಬೇಗ ಮತದಾನ ಮುಗಿಸಿ ಕೆಲಸಕ್ಕೆ ಹೋಗುವ ಆತುರ ಅವರಿಗೆ.
ಸದ್ಯಕ್ಕಂತೂ ಕಡಿಮೆ ಸಂಖ್ಯೆಯಲ್ಲಿ ಕಾಣುವವರು ಸುಶಿಕ್ಷಿತರು. ಸರಕಾರ ಮತದಾನದ ದಿವಸ ರಜೆ ಘೋಷಿಸುತ್ತದೆ. ಬಹುರಾಷ್ಟ್ರೀಯ (MNC) ಕಂಪನಿಗಳಿಗೆ ರಜೆ ಇರುತ್ತದೆ. ರಜೆ ಇರುವ ಮೇಲ್ವರ್ಗ (upper class) ಮತ್ತು ಮೇಲ್ಮಧ್ಯಮ ವರ್ಗ (upper middle class) ಮತದಾನ ಮಾಡಲು ಉದಾಸೀನ ಮಾಡುವುದೇ ಹೆಚ್ಚು. ಚುನಾವಣಾ ಪ್ರಚಾರದಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಬಡ ಹಾಗೂ ಕೆಳ ಮಧ್ಯಮ ವರ್ಗಕ್ಕೆ ಕೇಂದ್ರೀಕೃತವಾಗಿರುವುದೂ ಅದೇ ಕಾರಣಕ್ಕೆ.
ಮೇಲ್ವರ್ಗ ಮತ್ತು ಮೇಲ್ಮಧ್ಯಮ ವರ್ಗದ ಹೆಚ್ಚಿನ ಜನ ಸುಮ್ಮನೇ ಕುಳಿತು ಮಾತನಾಡುತ್ತಾರೆಯೇ ಹೊರತು ಮತದಾನ ಮಾಡುವುದಿಲ್ಲ ಎಂಬುದು ರಾಜಕೀಯ ಪಕ್ಷಗಳಿಗೆ ಚೆನ್ನಾಗಿ ತಿಳಿದಿದೆ.
ನಾನು ಸುಮಾರು ಹದಿನೈದು ದೇಶಗಳನ್ನು ನೋಡಿದ್ದೇನೆ. 1945~50 ರ ಆಸುಪಾಸಿನಲ್ಲಿ ನೆಲಸಮವಾಗಿದ್ದ ದೇಶಗಳು ಇವತ್ತು ಕಂಡಿರುವ ಅಭಿವೃದ್ಧಿಯನ್ನು ನೋಡಿದರೆ ನಾವಿನ್ನೂ ತುಂಬಾ ಹಿಂದಿದ್ದೇವೆ. ದೂರದೃಷ್ಟಿ ಇರುವ ಸರಕಾರಗಳು ಮತ್ತು ಇಚ್ಛಾಶಕ್ತಿ ಇರುವ ನಾಯಕರು ಬರದೇ ಇದ್ದದ್ದೇ ಇದಕ್ಕೆ ಕಾರಣ ಎಂಬುದು ನನ್ನ ಅನಿಸಿಕೆ. ಕೆಳ ವರ್ಗದ ಜನರನ್ನು ಆಮಿಷಕ್ಕೊಳಪಡಿಸಿ ಮತ ತಿರುಗಿಸುತ್ತಾರೆ ಎಂಬುದು ನಗ್ನ ಸತ್ಯ!
ಸುಶಿಕ್ಷಿತ ವರ್ಗ ಜಡ ಬಿಟ್ಟು ಮತದಾನ ಮಾಡದೆಯೇ, ಸರಿಯಾದ ದೂರದೃಷ್ಟಿ ಇರುವ ಅಭ್ಯರ್ಥಿಗಳನ್ನು ಆರಿಸದೆಯೇ ನಮ್ಮ ದೇಶದ ಪ್ರಗತಿ ಕುಂಟುತ್ತಾ ಸಾಗಿರುವುದು.
ಮತ ಹಾಕದೇ complaint ಮಾಡುವ ಜನರಲ್ಲಿ ಮತ ಹಾಕಿ ಎಂಬುದು ನನ್ನ ಕೋರಿಕೆ.
ಮತದಾನ ಮಾಡಿ ದೇಶ ಬದಲಿಸಿ.
Saturday, May 12, 2018
***ಮತದಾನ ಮಾಡಿ***
Sunday, December 6, 2015
How to separate rotten apple?
What is the biggest headache that the world is facing today?
Certainly the most spoken is terrorism! Of course we have several other issues
like education, poverty, environmental changes and many more. However the focus
today has been terrorism. Terrorism has grown to an extent that it has superseded
all other issues.
We have ‘act of terror’ being discussed almost every day in
media & social media. Except few rich countries of Middle East like Dubai,
Abu Dhabi probably there is no country in this world which is not affected by
terrorism.
There is no more clarification or confirmation required to
the fact that Pakistan & Afghanistan are the places where terrorism is
grown! It is also an established fact today that the funding that Pakistan
& Afghanistan received from US was utilized to grow terrorism. There is no
doubt that the ISIS is Syria, Iraq & in the neighbouring countries is the
biggest terrorist group today. Also no more evidence is required to the fact
that all the acts of terror today are executed by radical Islamist groups.
Well, now we know where it originated, where it has the
strong base, who funded, what is the motive etc. It should be easy to destroy
them right? Well known Canadian writer, publisher Mr. Tarek Fatah says ‘destroy
Pakistan; that is THE solution to put an end to terrorism’. I tend to disagree
with him! Radicalisation by Islamic terrorists has reached to an extent that,
today it is really difficult to identify who is radicalised & who is not.
Let us take the recent case of shooting in California. The family of Syed Rizwan
Farook and his wife Tashfeen Malik say that they are in shock; they had no clue
that Syed & Tashfeen could do this.
I also have many Muslim friends. All my neighbours in my
hometown are Muslims. We are so friendly, cooperative and share so many things
and I dont find a trace of radicalisation in them. I am sure that this is the
experience with rest of non-Muslims. It is only when one such person of our acquaintance
is being taken in custody for terror links we get to know that he/she had such
a link! The radicalization is going on via all kind of medium that is possible.
We are unable to trace all of them in spite of having all modern technology! And
every time it is an act by Radical Islamic group!
How do we identify every person who is being radicalised,
how do we identify that person who could be a threat to our society? How do we
identify those rotten apples from the basket in which every apple looks perfect
from outside?
ಇಂದು ಚೆನ್ನೈ ನಾಳೆ ಮಿಕ್ಕುಳಿದವೈ!
ನಿನ್ನೆ ಟ್ವೀಟರ್ ನೋಡುತ್ತಿದ್ದೆ, ಒಂದು ಟ್ವೀಟ್ ಬಹಳ
ಇಷ್ಟವಾಯಿತು. ಪ್ರತೇಶ್ ಎಂಬವರ ಆ ಟ್ವೀಟ್ ಹೀಗಿತ್ತು - "The great thing about democracy is that it gives every voter a chance to do
something stupid" ಅಂದರೆ ’ಪ್ರಜಾಪ್ರಭುತ್ವದ ವಿಶಿಷ್ಟತೆ ಏನೆಂದರೆ
ಅದು ಪ್ರತಿಯೊಬ್ಬ ಮತದಾರನಿಗೂ ಒಂದು ಮೂರ್ಖತನದ ಕೆಲಸ ಮಾಡಲು ಅವಕಾಶ ಕೊಡುತ್ತದೆ’. ಎಷ್ಟೊಂದು ಸತ್ಯದ ಮಾತು! ನಾವು ನಮ್ಮ ರಾಜಕಾರಣಿಗಳತ್ತ
ಬೊಟ್ಟು ಮಾಡಿ ಹೇಳುತ್ತಿರುತ್ತೇವೆ - ’ನಮ್ಮನ್ನು ಮೂರ್ಖರನ್ನಾಗಿಸಿದರು, ನಮಗೆ ಮೋಸಮಾಡಿದರು’ ಎಂಬ ಹಾಗೆ. ಆದರೆ ನಿಜವಾಗಿ ನೋಡಿದರೆ ನಾವು ಮತ್ತೆ
ಮತ್ತೆ ಮೂರ್ಖತನದ ಕೆಲಸ ಮಾಡುತ್ತಾ ಬರುತ್ತಿದ್ದೇವೆ. ನಾವು ತಿಳಿದೂ ತಿಳಿದೂ
ಮೋಸಹೋಗುತ್ತಿದ್ದೇವೆ. ಹಾಗಾಗಿಯೇ ನಮ್ಮ ಹಳ್ಳಿಗಳು ಉದ್ಧಾರವಾಗುತ್ತಿಲ್ಲ, ನಗರಗಳೂ ಉದ್ಧಾರವಾಗುತ್ತಿಲ್ಲ!
ಚೆನ್ನೈಯಲ್ಲಿ ಕಳೆದೆರಡು ದಿವಸಗಳಿಂದ ಆಗುತ್ತಿರುವ ಜಲಪ್ರಳಯವನ್ನೇ ನೋಡಿ. ಚೆನ್ನೈ
ಮುಖ್ಯಮಂತ್ರಿ ಜಯಲಲಿತಾ ಹೇಳುತ್ತಾರೆ - "ಭಾರೀ ಮಳೆಯಾದಾಗ ನಷ್ಟಗಳಾಗುವುದು ಸ್ವಾಭಾವಿಕ, ತ್ವರಿತ ಕಾರ್ಯಾಚರಣೆ ಮಾತ್ರವೇ ಸರಕಾರದ ಕಾರ್ಯಕ್ಷಮತೆಯ ಮಾನದಂಡ"
ಎಂದು. ಅಂದರೆ ಇವರು ಈ ಪರಿಸ್ಥಿತಿಗೆ ಯಾವುದೇ ರೀತಿಯ ನೈತಿಕ ಹೊಣೆಗಾರಿಕೆ ಹೊರಲು ತಯಾರಿಲ್ಲ.
ಹೌದು ಚೆನ್ನೈಯಲ್ಲಿ ವಿಪರೀತ ಮಳೆಯಾಗಿದೆ, ಮಳೆ ಬೀಳುತ್ತಲೇ ಇದೆ.
ಹವಾಮಾನ ವರದಿಯ ಪ್ರಕಾರ ಇನ್ನೂ ಎಪ್ಪತೆರಡು ಗಂಟೆ ಮಳೆ ಬೀಳುತ್ತಲೇ ಇರುತ್ತದೆ. ಆದರೆ ಬಿದ್ದ
ನೀರು ಎಲ್ಲೂ ಹರಿದು ಹೋಗುವುದಿಲ್ಲ. ನೀರಿನ ಮಟ್ಟ ಏರುತ್ತಲೇ ಹೋಗುತ್ತದೆ. ಯಾಕೆ ಹೀಗೆ?
ನಾನು ಚೆನ್ನೈಗೆ ಬಹಳಷ್ಟು ಸಲ ಹೋಗಿದ್ದೇನೆ. ಸುಮಾರು ಐದು ವರ್ಷಗಳ ಕಾಲ ತಿಂಗಳಲ್ಲಿ
ನಾಲ್ಕೈದು ದಿನ ಚೆನ್ನೈಯಲ್ಲೇ ಕಳೆಯುತ್ತಿದ್ದೆ. ಒಂದು ಸಣ್ಣ ಮಳೆ ಬಂದರೆ ಸಾಕು ರಸ್ತೆಯ
ತುಂಬೆಲ್ಲಾ ನೀರು, ಟ್ರಾಫಿಕ್ ಜಾಮ್. ದೊಡ್ಡ ಮಳೆ
ಬಂದರೆ ಒಂದಷ್ಟು ಪ್ರದೇಶಗಳು ಜಲಾವ್ರತ. ಚೆನ್ನೈಯಲ್ಲಿ ಹಲವು ವರ್ಷಗಳಿಂದ ವಾಸವಿರುವ ಮಿತ್ರನೊಬ್ಬ
ಹೇಳುತ್ತಿರುತ್ತಾನೆ - "ಒಂದು ಅರ್ಧ ಗಂಟೆ ಮಳೆ ಬಂದರೆ ಅಪಾರ್ಟ್‌ಮೆಂಟ್ ಎದುರು
ಸೊಂಟದವರೆಗೆ ನೀರು ತುಂಬುತ್ತದೆ. ಕೆರೆಯಲ್ಲಿ ನಡೆದಂತೆ ಆ ಕೊಳಚೆ ನೀರಿನಲ್ಲಿ ನಡೆದುಕೊಂಡೇ ಮನೆ
ಸೇರಬೇಕು. ಮನೆ ಸೇರಿದರೆ ಮನೆಯೊಳಗೆ ಕರೆಂಟು, ನೀರು ಎರಡೂ
ಇರುವುದಿಲ್ಲ. ಮನೆಯೆಲ್ಲಾ ಜಲಾವ್ರತ ಕುಡಿಯುವುದಕ್ಕೆ ಒಂದು ಹನಿ ನೀರಿಲ್ಲ. ಸಂಸಾರ ಸಮೇತ ಇದ್ದರೆ
ಮನೆಯವರಾದರೂ ಸ್ವಲ್ಪ ನೀರು ಎತ್ತಿಡುತ್ತಾರೆ, ಬ್ಯಾಚುಲರ್ ಹುಡುಗರಿಗೆ
ನೀರು ಕರೆಂಟ್ ಇಲ್ಲದ ರಾತ್ರಿಯೇ ಖಾತ್ರಿ" ಎಂಬಹಾಗೆ. ಇದು ಅರ್ಧ - ಒಂದು ಗಂಟೆಯ ಮಳೆಯ
ಕಥೆ. ಇನ್ನು ಇಪ್ಪತ್ತನಾಲ್ಕು ಗಂಟೆ ಮಳೆ ಬಂದರೆ ಏನಾದೀತು ಎಂಬ ಪ್ರಶ್ನೆಗೆ ಈಗ ಉತ್ತರ
ಸಿಕ್ಕಿದೆ.
ಕೊಂಚವೂ ನಿಯಂತ್ರಣ ಇಲ್ಲದೆ ಹಿಗ್ಗಾಮುಗ್ಗಾ ಕಾಂಕ್ರೀಟೀಕರಣ ಮಾಡಿರುವುದರ ಪ್ರಭಾವ ಇದು.
ಕಾಂಕ್ರೀಟೀಕರಣ ಹೇಗೆ ನಡೆದಿದೆ ಎಂದರೆ ನೀರಿಗೆ ಇಂಗುವುದಕ್ಕೆ ಜಾಗವೇ ಇಲ್ಲ. ಇನ್ನು ಒಳಚರಂಡಿಯ
ವ್ಯವಸ್ಥೆಗಳಂತೂ ಇಲ್ಲವೇ ಇಲ್ಲ! ಇದು ಚೆನ್ನೈ ಮಹಾನಗರವೊಂದರ ಕಥೆಯಲ್ಲ! ನಮ್ಮ ಬೆಂಗಳೂರಿನಲ್ಲೂ
ಇದೇ ಕಥೆ. ಮುಂಬೈ, ದೆಹಲಿ ಮುಂತಾದ ಮಹಾನಗರಗಳಲ್ಲೂ ಇದೇ
ಕಥೆ. ನಮ್ಮ ಹಳ್ಳಿಗಳಲ್ಲಿ ಹತ್ತು ಸೆಂಟಿಮೀಟರ್ ಮಳೆಯಾದರೆ ’ಹಾ’ ಎನಿಸುತ್ತದೆ. ಅದೇ ಒಂದು
ಮಹಾನಗರಲ್ಲಿ ಹತ್ತು ಸೆಂಟಿಮೀಟರ್ ಮಳೆ ಬಂದರೆ ’ಹಾಯ್ ಹಾಯ್’ ಎಂದು ಭಯದ ವಾತಾವರಣ
ಸೃಷ್ಟಿಯಾಗುತ್ತದೆ.
ನಮ್ಮ ದೇಶದಲ್ಲಿ ನಗರಾಭಿವೃದ್ಧಿ ಸಚಿವರ ಖಾತೆ ಸಿಗುವುದು ಅದೃಷ್ಟದ ವಿಷಯವಾಗಿದೆ. ಒಂದಷ್ಟು
ಕೆರೆಗಳನ್ನು ಮುಚ್ಚಿ, ಒಂದಷ್ಟು ಸರಕಾರೀ ಜಮೀನನ್ನು
ಒತ್ತುವರಿ ಮಾಡಿ, ಒಂದಷ್ಟು ಹೊಲಗಳನ್ನು ಒತ್ತುವರಿ ಮಾಡಿ ಲೇಔಟ್‌ಗಳನ್ನಾಗಿ
ಪರಿವರ್ತಿಸುವುದು. ಹೀಗೆ ಲೇಔಟ್ ಮಾಡುವ ಮೊದಲೇ ಸುತ್ತಮುತ್ತಲಿನ ಒಂದಷ್ಟು ಎಕರೆ ತಮ್ಮ ಹೆಸರಿಗೆ
ಮಾಡಿಕೊಳ್ಳುವುದು. ನೋಟಿಫೈ, ಡೀನೋಟಿಫೈ ಇತ್ಯಾದಿ ಆಟಗಳಾಡಿ ಕೋಟಿ ಕೋಟಿ
ಎಣಿಸುವುದು. ಒಬ್ಬ ನಗರಾಭಿವೃದ್ಧಿ ಸಚಿವನಿಗೂ ನಗರೀಕರಣದ ಕಲ್ಪನೆಯೇ ಇರುವಂತಿಲ್ಲ.
ನಗರಾಭಿವೃದ್ಧಿ ಅಂದರೆ ಲೇಔಟ್ ಮಾಡುವದು, ಅಪಾರ್ಟ್‌ಮೆಂಟ್ ಕಟ್ಟುವುದು
ಎಂದಷ್ಟೇ ತಲೆಯಲ್ಲಿದ್ದಂತಿದೆ. ಇಂತಹ ಸಚಿವರಿದ್ದರೆ ಭ್ರಷ್ಟ ಅಧಿಕಾರಿಗಳಿಗೆ ಹಬ್ಬ. ನಿಯತ್ತಿನ
ಅಧಿಕಾರಿಗಳು ಮಾತನಾಡಿದರೆ ವರ್ಗಾವಣೆ ಆಗುತ್ತದೆ. ಅದಾಗಬಾರದೆಂದರೆ ಸುಮ್ಮನಿರಬೇಕು.
ಇನ್ನು ಮಹಾನಗರಗಳಲ್ಲಿ ವಾಸವಿರುವವರಲ್ಲಿ ಸುಮಾರು ೫೦% ಜನರು ವಲಸಿಗರು. ಅದ್ಯಾವುದೋ
ದೂರದೂರಿನಿಂದ ಇನ್ನೊಂದು ರಾಜ್ಯದಿಂದ ಹೊಟ್ಟೆಪಾಡಿಗಾಗಿ ಬಂದು ನೆಲೆಸಿದವರು. ಅವರಲ್ಲಿ
ಹೆಚ್ಚಿನವರಿಗೆ ಆ ಊರಿನ ಬಗ್ಗೆ, ಅಲ್ಲಿಯ ಭಾಷೆಯ ಬಗ್ಗೆ, ಅಲ್ಲಿನ ಸಂಸ್ಕೃತಿಯ ಬಗ್ಗೆ, ಸ್ಥಳೀಯ ರಾಜಕೀಯದ ಬಗ್ಗೆ ಆಸಕ್ತಿಯಾಗಲೀ ಗೌರವವಾಗಲೀ
ಇರುವುದಿಲ್ಲ. ಅವರು ಏನಿದ್ದರೂ ಫೇಸ್‌ಬುಕ್ಕಿನಲ್ಲಿ, ಟ್ವೀಟರ್‌ನಲ್ಲಿ
ಅವರಿಗೆ ನೆಲೆಕೊಟ್ಟ ಊರನ್ನು ಹಳಿಯುವು ಬಿಟ್ಟು ಬೇರೇನೂ ಮಾಡುವುದಿಲ್ಲ. ಕನಿಷ್ಟಪಕ್ಷ ಮತಚಲಾವಣೆ
ಕೂಡಾ ಮಾಡುವುದಿಲ್ಲ. ಇನ್ನು ನಗರಗಳ ಅಭಿವೃದ್ಧಿ ಸರಿಯಾಗಿ ಆದರೇನು, ಆಗದಿದ್ದರೇನು?
ಹೀಗಾಗಿಯೇ ತಮಗೆ ಸಿಕ್ಕ ನಾಲ್ಕೈದು ವರ್ಷದ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು
ಹಣ ಮಾಡಿದರಾಯಿತು ಎಂಬ ಹಾಗೆ ರಾಜಕಾರಣಿಗಳು, ಅಧಿಕಾರಿಗಳು
ನಡೆದುಕೊಳ್ಳುತ್ತಾರೆ. ಚೆನ್ನೈಯಲ್ಲಿ ಆದಂತಹ ದುರದೃಷ್ಟಕರ ಘಟನೆ ನಡೆದಾಗ ತಮ್ಮದೇನೂ ತಪ್ಪಿಲ್ಲ
ಎಂಬ ಹೇಳಿಕೆ ಕೊಡುತ್ತಾರೆ. ಆಗ ನಾವು ’ನಮ್ಮನ್ನು ಮೂರ್ಖರನ್ನಾಗಿಸಿದರು’ ಎಂಬ ಹೇಳಿಕೆ
ಕೊಡುತ್ತೇವೆ. ಇಂದು ಚೆನ್ನೈ, ನಾಳೆ ಇತರೇ ಮಹಾನಗರಗಳೂ ಹೀಗೇ
ಮುಳುಗುವುದಿದೆ!
Wednesday, November 25, 2015
****ಇಂಟಾಲರೆನ್ಸ್ ನಾಟಕ**** ****Intolerance Drama****
****ಇಂಟಾಲರೆನ್ಸ್ ನಾಟಕ****
ದೃಷ್ಯ: ಕಿರಣ್ - ಅಮೀರ್ ಡೈನಿಂಗ್ ಟೇಬಲ್ ಎದುರು ಕುಳಿತಿದ್ದಾರೆ.
ಕಿರಣ್ - (ಅಸಮಧಾನದ ಧ್ವನಿಯಲ್ಲಿ) ಈಗೀಗ ನೀನು ತುಂಬಾ ಕೋಪ ಮಾಡ್ಕೋತೀಯಾ... ಸುಮ್-ಸುಮ್ನೆ ಸಿಟ್ಟಾಗ್ತೀಯ!
ಅಮೀರ್ - (ಮುಖ ಗಂಟಿಕ್ಕಿಕೊಂಡು) ಇಲ್ಲ... ಹಾಗೇನಿಲ್ಲ...
ಕಿರಣ್ - ನೋಡು ಈಗ್ಲೂ ಕೋಪ... ಮಕ್ಕಳಿಗೆ ಕೂಡಾ ನಿನ್ನಲ್ಲಿ ಮಾತಾಡೋಕೆ ಹೆದರಿಕೆ ಈಗೀಗ... ಏನು
ಪ್ರಾಬ್ಲಮ್?
ಅಮೀರ್ - (ಒಂದು ನಿಟ್ಟುಸಿರು ಬಿಟ್ಟು) ಏನಿಲ್ಲಾ ಈ ಮೋದಿ ಸರ್ಕಾರ ಬಂದಮೇಲೆ ಯಾಕೋ ಮನಸ್ಸೇ ಸರಿ
ಇಲ್ಲ. ನಂಗೆ ಟಾಲರೇಟ್ ಮಾಡಕ್ಕೆ ಆಗ್ತಿಲ್ಲ!
ಕಿರಣ್ - ನಿಂಗೇನೋ ಮೋದಿ ಆಗ್ದೆ ಇರಬಹುದು. ಆದ್ರೆ ಅವ್ರು ನಿಂಗೇನು ಮಾಡಿಲ್ಲ ತಾನೆ... ಹಿಂದೂ
ದೇವರನ್ನು ಅಷ್ಟೆಲ್ಲಾ ಕೆಟ್ಟದಾಗಿ ತೋರ್ಸಿದ್ರೂ ಪಿ.ಕೆ. ಚೆನ್ನಾಗೇ ನಡೀತು ತಾನೆ?...
ಅಮೀರ್ - (ಮತ್ತೆ ಸಿಟ್ಟಾಗಿ) ಅದೇ... ನಾನು ಅದನ್ನ
ಒಂದು ದೊಡ್ಡ ವಿಷ್ಯ ಮಾಡ್ತಾರೆ ಅಂದ್ಕೊಂಡಿದ್ದೆ.. ನಾನು ಒಂದಷ್ಟು ಇಂಟಾಲರೆನ್ಸ್ ಬಗ್ಗೆ ಕಮೆಂಟ್
ಕೊಡ್ಬೋದು ಅಂದ್ಕೊಂಡಿದ್ದೆ... ಬ್ಯಾನ್ ಮಾಡ್ತಾರೆ ಅಂದ್ಕೊಂಡೆ... ಬ್ಯಾನ್ ಹಾಕೋದು ಬಿಡು ಒಂದು ಮಾತೂ
ಹೇಳಲೇ ಇಲ್ಲ...
ಕಿರಣ್ - ಸರಿ ಅದಕ್ಕೆ ನೀನು ಮನೆಯಲ್ಲಿ ಸಿಟ್ಟು ಮಾಡ್ಕೊಂಡ್ರೆ ನಡೆಯುತ್ತಾ? ಪಾಪ ಮಕ್ಕಳು ಹೆದರಿಕೊಂಡಿದ್ದಾರೆ ಗೊತ್ತಾ?
ನಿಂಗೆ ಕಮೆಂಟ್ ಮಾಡ್ಲೇ ಬೇಕು ಅಂದ್ರೆ ಸತ್ಯಮೇವ ಜಯತೇ ಪ್ರೋಗ್ರಾಮ್ ಇದ್ಯಲ್ಲಾ? ಅದ್ರಲ್ಲೇ ಏನಾದ್ರೂ ಕಮೆಂಟ್ ಮಾಡು...
ಅಮೀರ್ - (ಮುಖ ಕೆಂಪಾಗಿಸಿ, ಫುಲ್ ಗರಂ ಆಗಿ) ಈಗ ಅದಕ್ಕೂ
ಕತ್ತರಿ ಬೀಳುತ್ತೆ ಅಂತ ಅನ್ನಿಸ್ತಾ ಇದೆ. ಈ ಸರ್ಕಾರ ಮೋದಿ ವಿಶನ್ ಪ್ರಕಾರ ಹೀಗೆ ಒಂದೊಂದೇ ಪ್ರಾಬ್ಲಮ್
ಸರಿ ಮಾಡ್ತಾ ಹೋದ್ರೆ ನಂಗೆ ಆ ಪ್ರೋಗ್ರಾಮ್‌ಗೂ ಟಾಪಿಕ್ ಸಿಗಲ್ಲ. ಏನ್ ಮಾಡೋದು? ಸಿನೆಮಾದಲ್ಲಿ ಯಾರ ಅದೃಷ್ಟ ಯಾವಾಗ ಕೈಕೊಡುತ್ತೆ ಗೊತ್ತಿಲ್ಲ. ಒಮ್ಮೆ ಟೈಮ್ ಕೆಟ್ಟರೆ ಅಡ್ವಟೈಸಮೆಂಟ್
ಕೂಡಾ ಸಿಗಲ್ಲ ಗೊತ್ತಲ್ಲ. ಇನ್ನು ಸತ್ಯಮೇವ ಜಯತೇ ನಿಂತ್ರೆ ದುಡ್ಡು ಎಲ್ಲಿಂದ ತರೋದು? ಮನೆ ಓಡ್ಸೋದು ಹೆಂಗೆ?
ಕಿರಣ್ - ನಂಗೆ ಅದೆಲ್ಲಾ ಗೊತ್ತಿಲ್ಲ. ನೀನು ನಿನ್ನ ಕರಿಯರ್ ಪ್ರಾಬ್ಲಮ್‌ನ ಮನೆಗೆ ತರೋದು ನಂಗೆ
ಇಷ್ಟ ಆಗಲ್ಲ. ನಿಂಗೆ ಈಗೀಗ ತಾಳ್ಮೆನೇ ಇಲ್ಲ. ನಿನ್ನ ಕೋಪ ತಾಪ ನೋಡಿದ್ರೆ ನಂಗೆ ಭಯ ಆಗತ್ತೆ. ಈಗ
ಏಳೆಂಟು ತಿಂಗಳಿಂದ ಇಲ್ಲಿ ಇಂಟಾಲರೆನ್ಸ್ ಜಾಸ್ತಿ ಆಗ್ತಾ ಇದೆ. ನನ್ನ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಆಗಿದೆ. ನಂಗೆ ಅನ್ಸುತ್ತೆ
ನೀನು ಒಂದು ಬ್ರೇಕ್ ತೆಗೋಬೇಕು. ನಾವು ಈ ಪಾಲಿಟಿಕ್ಸ್ ಎಲ್ಲಾ ಬಿಟ್ಟು ಎಲ್ಲಾದರು ವಿದೇಶಕ್ಕೆ ಒಂದಷ್ಟು
ದಿನ ಹಾಲಿಡೇಗೆ ಹೋಗೋಣ,
ಅಮೀರ್ - (ಅಷ್ಟು ಹೊತ್ತು ಯಾವುದೋ ಲೋಕದಲ್ಲಿ ಇದ್ದಂತೆ) ಪುನಃ ಹೇಳು... ಏನಾಗ್ತಾ ಇದೆ.
ಕಿರಣ್ - (ಕೋಪದಲ್ಲಿ) ಇಂಟಾಲರೆನ್ಸ್ ತುಂಬಾ ಜಾಸ್ತಿ ಆಗ್ತಾ ಇದೆ. ನನ್ನ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಆಗ್ತದೆ. ಎಲ್ಲಾದ್ರೂ
ವಿದೇಶಕ್ಕೆ ಹೋಗೋಣ. ಅರ್ಥ ಆಯ್ತಾ?
ಅಮೀರ್ - ಸಾಕು ಸಾಕು... ನಂಗೆ ಇದೇ ಬೇಕಿತ್ತು...
******(ತೆರೆ...)******
##################################################################
****Intolerance Drama****
Scene: Kiran & Amir are sitting
at the dining table.
Kiran – (In
grave voice) These days you get angry very often... For no reasons... Whats
wrong?
Amir – (frowning)
Nothing like that... I am fine...
Kiran – See,
even now you are angry. Even kids are afraid to speak to you these days. Whats
the matter?
Amir – (With
a sigh) After this Modi government came into power I am disturbed. I cant
tolerate this.
Kiran – You might
not like Modi, might have differences with him, but what has his government
done to you? In-spite of mocking Hindu gods PK did very well. Isn’t it?
Amir – (now
again with angry face) I expected them to make PK a big issue. I was completely
prepared to make comments on government about their intolerance. I expected
that they would ban the movie... But no single comment...
Kiran – Ok..
I understand... But showing anger at home isn’t the solution right? Do you
know, our kids are afraid to speak to you these days.
If you want
to make comments on government use your Satyameva Jayate program. Bring up some
issue there with which you can make comments on intolerance.
Amir – (Angry
red face) I feel even that might come to an end. If this government addresses
& solves issues with the vision of Modi I will not have any topic for that
program. An artist can lose his star value anytime... If times are bad you dont
even get endorsements... And then if Satyameva Jayate ends what do I do? Don’t
we need money for our luxurious life?
Kiran – I don’t
know what you are going to do. Don’t bring your career tension to home. I dont
like it. You dont have patience these days. Intolerance is rising in the last
7-8 months. I am worried about the future of our children. I think you should
take a break. Forget all these politics for some time. Lets go for a vacation
outside India.
Amir – (As
if he wasn’t listening) Come again...
Kiran – (Shouting
in anger) Intolerance is rising... I am worried about the future of our kids. Lets
go somewhere outside India... Understood?
Amir –
Enough... This is what I was looking for...
******End of the drama******
-ಸಮೀರ ದಾಮ್ಲೆ
-Sameera Damle
Photo Courtesy: http://www.santabanta.com/
Tuesday, November 17, 2015
ಫ್ರಾನ್ಸ್‌ನಲ್ಲಿ ಹೀಗೊಂದು ಊಟ
ನನಗೆ ಫ್ರಾನ್ಸ್‌ಗೆ ಹೋದಾಗಲೆಲ್ಲಾ ಒಂದಿಲ್ಲ ಒಂದು ಫಜೀತಿ ಆಗಿಯೇ ಆಗುತ್ತದೆ ಎಂದು ಕಾಣುತ್ತದೆ. ಹೋದ ಮೂರು-ನಾಲ್ಕು ಬಾರಿಯೂ ಏನಾದರೊಂದು ಕೆಟ್ಟ ಅನುಭವ!
ಅದರಲ್ಲೂ ಈ ಪ್ರಯಾಣದ ಅನುಭವ ಆದ ಮೇಲೆ ನಾನು ಪ್ಯಾರಿಸ್‌ಗೆ ಹೋಗುವ ಸಂದರ್ಭಗಳನ್ನು ತಪ್ಪಿಸಿಕೊಳ್ಳಲು ಪ್ರಾರಂಭಿಸಿದ್ದೇನೆ!
ಒಂದು ವಾರದ ಕಾರ್ಯಾಗಾರಕ್ಕಾಗಿ ಪ್ಯಾರಿಸ್‌ಗೆ ಹೊರಟಿದ್ದೆ. ಹಿಂದಿನ ಪ್ರವಾಸದ ಅನುಭವಗಳಿಂದ ಫ್ರೆಂಚರು ಒರಟರು, ಇಂಗ್ಲಿಷ್‌ನಲ್ಲಿ ಪ್ರಶ್ನೆಕೇಳಿದರೆ ಮುಖತಿರುಗಿಸುತ್ತಾರೆ, ಒಟ್ಟಾರೆಯಾಗಿ ಅಲ್ಲಿನ ಬೀದಿಗಳಲ್ಲಿ ನಡೆದಾಡುವಾಗ ಸೇಫ್ ಅನ್ನಿಸುವುದಿಲ್ಲ ಎಂಬುದು ಮನಸ್ಸಿನಲ್ಲಿ ಕುಳಿತಿತ್ತು. ಹೋಗುವುದು ಅನಿವಾರ್ಯವಾದ ಕಾರಣ ಹೊರಟಿದ್ದೆ.
ಅದು ಫೆಬ್ರವರಿ ತಿಂಗಳು, ವಿಪರೀತ ಚಳಿ, ಹಿಮ ಬೀಳುತ್ತಿರುವ ಕಾಲ. ಕೈಯಲ್ಲಿದ್ದ ಕ್ಯಾಬಿನ್ ಲಗೇಜಿನಲ್ಲಿ ಚಳಿಗೆ ಬೇಕಾದ ಬಟ್ಟೆಗಳೇ ತುಂಬಿದ್ದವು. ಇನ್ನೊಂದು ಸೂಟ್‌ಕೇಸಿನಲ್ಲಿ ಬೇಕಾದ ಬಟ್ಟೆಬರೆ ಮತ್ತು ದಕ್ಷಿಣ ಭಾರತೀಯ ಸಸ್ಯಾಹಾರಿ ಪ್ರಯಾಣಿಕರ ಆಪತ್ಭಾಂದವ MTR redy to eat ನ ನಾಲ್ಕೈದು ಪ್ಯಾಕೆತುಗಳು ತುಂಬಿ ವಿಮಾನ ಸಿಬ್ಬಂದಿಯ ಕೈಗೊಪ್ಪಿಸಿ ಹೊರಟದ್ದಾಯಿತು. ಜನಾಂಗೀಯ ತಾರತಮ್ಯ ಏರ್ ಫ್ರಾನ್ಸ್ ವಿಮಾನ ಹೊರಡುತ್ತಲೇ ಕಾಣಲು ಪ್ರಾರಂಭವಾಯಿತು. (ಏರ್ ಫ್ರಾನ್ಸ್ ವಿಮಾನದಲ್ಲಿ ಹಲವು ಸಲ ಜನಾಂಗೀಯ ತಾರತಮ್ಯ ಗಮನಿದ್ದೇನೆ). ಯಾರೋ ಪ್ರಾಯವಾದವರು ಸಸ್ಯಾಹಾರ ಕೇಳಿದರೆ ತುಂಬಾ ಗರಂ ಆಗಿ ’ಟಿಕೆಟ್ ತೆಗೆದುಕೊಳ್ಳುವಾಗಲೇ ಕಾಯ್ದಿರಿಸಬೇಕಿತ್ತು’ ಎಂದು ಬಡಬಡಿಸಿ ನಡೆದ ಪರಿಚಾರಿಕೆ ಅವನ್ಯಾರೋ ಬಿಳಿಯ ಕೇಳಿದ್ದು ಇಲ್ಲ ಎಂದಾದಾಗ ನಡು ಬಗ್ಗಿಸಿ sorry ಹೇಳುವುದಕ್ಕೆ ಸಾಧ್ಯವಾಯಿತು.
ಅದೆಲ್ಲಾ ಇರಲಿ, ಈಗ ಪ್ಯಾರಿಸ್‌ನಲ್ಲಿ ಇಳಿಯೋಣ. ಅಲ್ಲಿಂದ ಪ್ರಾರಂಭವಾಗುತ್ತದೆ ನನ್ನ ನಿಜ ಫಜೀತಿ.
ನಾನು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿದ್ದರೆ ಟ್ಯಾಕ್ಸಿ ಹಿಡಿಯುವ ಕ್ರಮ ಇಲ್ಲ. ಮೊದಲೇ ಮೊಟ್ರೋ ವ್ಯವಸ್ಥೆಯ ಬಗ್ಗೆ ಮಾಹಿತಿ ನೋಡಿ ಇಟ್ಟಿದ್ದೆ ಎರಡು ಬಾರಿ ಮೆಟ್ರೋ ಬದಲಿಸಬೇಕಿತ್ತು. ಆದರೂ ಒಮ್ಮೊ ವಿಚಾರಿಸೋಣ ಅಂತ ಎರಡೂ ಸೂಟ್‌ಕೇಸ್ ಹಿಡಿದುಕೊಂಡು information counter ಗೆ ಹೋಗಿ ನನ್ನ ಹೋಟೆಲ್ ವಿಳಾಸ ತೋರಿಸಿ ರೈಲಿನ ಕುರಿತು ವಿಚಾರಿಸಿದೆ. ಅಲ್ಲಿ ’ಇದು ಪ್ಯಾರಿಸ್‌ನ ಇನ್ನೊಂದು ಮೂಲೆಯಲ್ಲಿದೆ. ಎರಡು ಬಾರಿ ಮೆಟ್ರೋ ಬದಲಿಸಬೇಕು. ಆದರೆ ಇವತ್ತು ಮೊಟ್ರೋ ಮುಷ್ಕರ ಇದೆ. ಕೆಲ ಲೈನುಗಳು ಮಾತ್ರ ಕೆಲಸ ಮಾಡುತ್ತಿವೆ. ನೀವು ಹೋಗಬೇಕಿರುವ ಲೈನುಗಳು ಸದ್ಯ ಚಾಲನೆಯಲ್ಲಿವೆ. ಬೇಗ ಹೋಗಿ ಎಂದ’.
ಬೇಗ ಬೇಗ ಹೋಗಿ ರೈಲು ಹತ್ತಿದೆ. ಸಿಗಬೇಕಿದ್ದ ಮೊದಲ ಮೆಟ್ರೋ ಲೈನು ಸಿಕ್ಕಿತು. ಅಲ್ಲಿ ಇಳಿದರೆ ಮುಂದಿನ ಲೈನು ಮುಷ್ಕರ ಘೋಷಣೆಯಿಂದ ನಿಂತಿದೆ ಎಂಬ ಮಾಹಿತಿ ಬಂತು. ಆ ಸ್ಟೇಷನ್ ನಲ್ಲಿದ್ದ ಅಧಿಕಾರಿಣಿ ಬಸ್ಸಿನಲ್ಲಿ ಹೋಗುವಂತೆ ತಿಳಿಸಿದಳು.
ಸ್ಟೇಷನ್‌ನಿಂದ ಹೊರಬಂದರೆ ಹಿಮ ಬೀಳುತ್ತಿದೆ. -5 ಉಷ್ಣಾಂಶ ಇರಬಹುದು. ಬಸ್ ನಿಲ್ದಾಣ ಸುಮಾರು ಅರ್ಧ ಮುಕ್ಕಾಲು ಕಿಲೋಮೀಟರ್ ದೂರದಲ್ಲಿದೆ ಅಂತ ತಿಳಿಯಿತು. ನಿರಂತರವಾಗಿ ಬೀಳುತ್ತಿರುವ ಹಿಮ, ನಡೆದುಕೊಂಡು ಬಸ್ ನಿಲ್ದಾಣ ತಲುಪಿದರೆ ಈಗಷ್ಟೇ ಬಸ್ ಕೂಡಾ ಮುಷ್ಕರಕ್ಕೆ ಕರೆ ನೀಡಿದ್ದಾರೆ ಅಂತ ತಿಳಿಸಿದರು. ಒಬ್ಬ ಪುಣ್ಯಾತ್ಮ ಅವನ ಕರುಣೆ ತೋರಿ ಅಷ್ಟು ಹೇಳದಿದ್ದರೆ ನಾನು ಇನ್ನೂ ಮುಕ್ಕಾಲು ಗಂಟೆ ಅಲ್ಲೇ ಕಾಯುತ್ತಿದ್ದೆ. ಯಾಕೆಂದರೆ ವೇಳಾಪಟ್ಟಿಯ ಪ್ರಕಾರ ಮುಂದಿನ ಬಸ್ಸು ಬರುವುದಕ್ಕೆ ಇನ್ನೂ ಮುಕ್ಕಾಲು ಗಂಟೆ ಇತ್ತು, ಭಾನುವಾರ ಬಸ್ಸುಗಳು ಕಡಿಮೆ! ಆತ ಟ್ಯಾಕ್ಸಿ ಹಿಡಿ ಅಂದ. ಟ್ಯಾಕ್ಸಿ ಸ್ಟಾಂಡಿಗೆ ಮತ್ತೆ ಸುಮಾರು ಮುಕ್ಕಾಲು-ಒಂದು ಕಿಲೋಮೀಟರ್ ನಡುಗೆ. ಎರಡು ಸೂಟ್‌ಕೇಸ್ ಹಿಡಿದುಕೊಂಡು ನಡೆಯುವಾಗ ಆ ಚಳಿಯಲ್ಲೂ ಬೆವರು ಬಿಚ್ಚಿತ್ತು.
ಅಲ್ಲಿ ತಲುಪಿದರೆ ಟ್ಯಾಕ್ಸಿ ಇಲ್ಲ! ಅಲ್ಲಿ ಒಬ್ಬ ಪೋಲಿಸ್ ಹೇಳಿದ ’ಇಲ್ಲಿ ನಿನಗೆ ಇವತ್ತು ಟ್ಯಾಕ್ಸಿ ಸಿಗುವುದಿಲ್ಲ. ಮೆಟ್ರೋ ಮತ್ತು ಬಸ್ಸು ಮುಷ್ಕರ ಅಂತ ಎಲ್ಲಾ ಟ್ಯಾಕ್ಸಿಗಳು ಬುಕ್ ಆಗಿದ್ದಾವೆ. ಬೇಗ ಮೆಟ್ರೋ ಸ್ಟೇಷನ್‌ಗ್ ಹೋಗು, ಮುಖ್ಯ ಮೆಟ್ರೋ ನಿಲ್ದಾಣಕ್ಕೆ ಒಂದೆರಡು ರೈಲುಗಳು ಹೋಗುತ್ತಿವೆ. ಮುಖ್ಯ ಮೆಟ್ರೋ ನಿಲ್ದಾಣದಲ್ಲಿ ಟ್ಯಾಕ್ಸಿ ಸಿಗಬಹುದು’ ಅಂತ! ಮತ್ತೆ ಅರ್ಧ ಕಿಲೋಮೀಟರ್ ಹಿಮತುಂಬಿದ ಫುಟ್‍ಪಾತಿನಲ್ಲಿ ಸೂಟ್‌ಕೇಸ್ ಎಳಕೊಂಡು ಓಡಿದರೆ ಕೊನೆಯ ರೈಲು ಮುಖ್ಯನಿಲ್ದಾಣಕ್ಕೆ ಹೊರಟು ನಿಂತಿತ್ತು. ಬದುಕಿದೆಯಾ ಬಡಜೀವಿ ಅಂತ ಅದರೊಳಗೆ ಹಾರಿದೆ.
ಮುಖ್ಯ ನಿಲ್ದಾಣಕ್ಕೆ ಬಂದು ಇನ್ನೂ ಮೂರ್ನಾಲ್ಕು ಟ್ಯಾಕ್ಸಿಯವರಲ್ಲಿ ’ಈ ವಿಳಾಸಕ್ಕೆ ಬರುವುದಿಲ್ಲ’ ಅಂತ ಹೇಳಿಸಿಕೊಂಡು, ಕೊನೆಗೂ ಒಂದು ಟ್ಯಾಕ್ಸಿ ಹಿಡಿದು ಹೋಟೆಲ್ ತಲುಪುವಾಗ ನಾನು ಅರ್ಧ ಜೀವವಾಗಿದ್ದೆ. ಬೆಳಗ್ಗೆ ಸುಮಾರು ಏಳು ಗಂಟೆಗೆ ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ಇಳಿದವ ಸಾರ್ವಜನಿಕ ಸಾರಿಗೆ ಹಿಡಿಯುವ ಸಾಹಸದಲ್ಲಿ ಹೋಟೆಲ್ ತಲುಪುವಾಗ ಗಂಟೆ ಮಧ್ಯಾಹ್ನ ಹನ್ನೆರಡು ಕಳೆದಿತ್ತು. ಒಂದು MTR ಪ್ಯಾಕೆಟುಗಳನ್ನು ಹೊಟ್ಟೆಗಿಳಿಸಿ ಮಲಗಿದೆ.
ಸಂಜೆ ಏಳುವಾಗ ಹೊಟ್ಟೆ ತಾಳ ಹಾಕುತ್ತಿತ್ತು, ರಾತ್ರಿ ಭೋಜನ ಕೂಟಕ್ಕೆ ಆಮಂತ್ರಣ ಇತ್ತು. ಹೇಗೂ ಊಟ ಇದೆಯಲ್ಲ MTR ಪ್ಯಾಕೆಟ್ ಇನ್ನೊಂದು ದಿನಕ್ಕೆ ಆಗುತ್ತದೆ ಅಂತ ಸುಮ್ಮನಾದೆ.
ಆವತ್ತಿನ ರಾತ್ರಿಯ ಭೋಜನ ಒಂದು ಸಾಂಪ್ರದಾಯಿಕ ಫ್ರಾನ್ಸ್ ರೆಸ್ಟೋರೆಂಟಿನಲ್ಲಿ ಆಯೋಜಿಸಲ್ಪಟ್ಟಿತ್ತು. ಅಲ್ಲೆಲ್ಲಾ ಭೋಜನಕೂಟ ಅಂದರೆ ನಮ್ಮ ದೇಶದ ಹಾಗೆ ಖಾರ ಸಿಹಿ ಇನ್ನೊಂದು ಮತ್ತೊಂದು ಅಂತ ಹತ್ತು ಐಟಂಗಳಿರುವುದಿಲ್ಲ. ಎಲ್ಲರೂ ಅವರವರಿಗೆ ಬೇಕಾದ ಒಂದು - ಎರಡು ವಿಷಯಗಳನ್ನು ಆರ್ಡರ್ ಮಾಡಿ ತಿನ್ನುವುದು. ಮತ್ತೆ ಅವ ತರಿಸಿದನ್ನು ಇವ ಸ್ವಲ್ಪ ರುಚಿ ನೋಡುವುದು, ಹಂಚಿಕೊಳ್ಳುವುದು ಇದೆಲ್ಲಾ ಇಲ್ಲ.
ನಾನು ಸಸ್ಯಾಹಾರಿ ಅಂದಾಗ ಆರ್ಡರ್ ತೆಗೆದುಕೊಳ್ಳುತ್ತಿದ್ದ ವೈಟರ್ ತಲೆಬಿಸಿ ಮಾಡಿಕೊಂಡ. ನಮ್ಮಲ್ಲಿ ಸಸ್ಯಾಹಾರ ಏನೂ ಇಲ್ಲವಲ್ಲಾ.. ’ಮೀನು ನಡೆಯುತ್ತದಾ?’ ಅಂದ. ’ಇಲ್ಲ ಗುರುವೇ’ ಅಂದೆ...
ಆಗಲೇ ಅಂದುಕೊಂಡೆ ಇವತ್ತು ನನ್ನ ಸಮಾರಾಧನೆ ನಡೆದದ್ದೇ ಅಂತ. ಮೊದಲೇ ಹೊಟ್ಟೆ ತಾಳ ಹಾಕುತ್ತಿತ್ತು. ಹೋಗಲಿ ಫ್ರ್ಂಚ್ ಫ್ರೈ (French Fry) ಆದರೂ ಕೊಡು ಅಂದರೆ ಅಲ್ಲಿ ಫ್ರೆಂಚ್ ಫ್ರೈ ಕೂಡಾ ಇಲ್ಲವಂತೆ. ಅದು ಸಾಂಪ್ರದಾಯಿಕ ಫ್ರೆಂಚ್ ಖಾದ್ಯವಲ್ಲವಂತೆ! ಕೊನೆಗೆ ಷೆಪ್ (ಬಾಣಸಿಗ) ನನ್ನೇ ಕೇಳುತ್ತೇನೆ ಅಂತ ಹೋದವ ವಾಪಾಸ್ ಬಂದಾಗ ಅವನ ಮುಖ ಅರಳಿತ್ತು. ಅದನ್ನು ನೋಡಿ ನನ್ನ ಹೊಟ್ಟೆ ಇನ್ನೂ ಜೋರಾಗಿ ತಾಳ ಹಾಕಲಾರಂಭಿಸಿತು.
ಆತ ’ಒಂದು ಐಟಂ ಇದೆ’ ಅಂದ. ’ಅದೇನಾದರೂ ಸರಿ ತೆಗೆದುಕೊಂಡು ಬಾ’ ಅಂದೆ. ಒಬ್ಬೊಬ್ಬರದ್ದೂ ಆಹಾರ ಬಂತು. ಕಾದು ಕಾದು ಕೊನೆಗೆ ನನ್ನ ಸಸ್ಯಾಹಾರ ಬಂತು!
ನೋಡಿದರೆ ಒಂದು ದೊಡ್ಡ ಹಸಿರು ಎಲೆಯ ಮೇಲೆ ಬೇಯಿಸಿದ ಒಂದು ದೊಡ್ಡ ಬೀಟ್‌ರೂಟ್. ಅದರ ಮೇಲೆ (ಬಹುಷಃ ಚಂದಕ್ಕೆ) ಒಂದು ತುಂಡು ಚೀಸ್! ಉಪ್ಪು ಖಾರ ಏನೂ ಇಲ್ಲದ ಬೀಟ್‌ರೂಟಿನ ನಿಜರುಚಿಯನ್ನು ನಾನು ಸವಿದದ್ದು ಅಲ್ಲೇ! ಪ್ರಯಾಣದ ಸುಸ್ತು, ಇಡೀ ದಿನದ ನಡಿಗೆ ಮತ್ತು ಮಧ್ಯಾಹ್ನ ತಿಂದ ಸ್ವಲ್ಪವೇ ಆಹಾರ ಇದರಿಂದ ಎಷ್ಟು ಹಸಿವಾಗಿತ್ತೆಂದರೆ ಇನ್ನೊಂದು ಪ್ಲೇಟ್ ಆರ್ಡರ್ ಮಾಡಿ ಬೀಟ್‌ರೂಟ್ ತಿಂದೆ!
http://kannadaforum.net/thread/4596-%E0%B2%AB%E0%B3%8D%E0%B2%B0%E0%B2%BE%E0%B2%A8%E0%B3%8D%E0%B2%B8%E0%B3%8D%E2%80%8C%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%B9%E0%B3%80%E0%B2%97%E0%B3%8A%E0%B2%82%E0%B2%A6%E0%B3%81-%E0%B2%8A%E0%B2%9F/

ಜರ್ಮನಿಯೇ ಯಾಕೆ ಬೇಕು? ಜರ್ಮನಿಯನ್ನು ಬೀಳಿಸುವ ಹುನ್ನಾರವೇ?
ಜರ್ಮನಿಯತ್ತ ಹೊರಟಿರುವ ಜನರನ್ನು ಗಮನಿಸಿ - ಇದರಲ್ಲಿ ಮಕ್ಕಳನ್ನು ಹೊತ್ತುಕೊಂಡ ಮಹಿಳೆಯರು, ವೃದ್ಧರೂ ಇದ್ದಾರೆ. ಆದರೆ ಬಹು ಸಂಖ್ಯೆಯಲ್ಲಿ ಯುವಕರೇ ಇದ್ದಾರೆ.
ಒಂದೆರಡಲ್ಲ... ನೂರಾರಲ್ಲ... ಸಾವಿರವೂ ಅಲ್ಲ... ಲಕ್ಷ ಲಕ್ಷ ಜನ ಹೋಗುತ್ತಿದ್ದಾರೆ!
’ಎಲ್ಲಿಗೆ ಹೋಗುತ್ತಿದ್ದೀರಿ?’ ಎಂದು ಕೇಳಿದರೆ ಎಲ್ಲರಲ್ಲೂ ಒಂದೇ ಉತ್ತರೆ - ’ಜರ್ಮನಿ’!
’ಯಾಕೆ?’ ಈ ಪ್ರಶ್ನೆಗೆ ಖಚಿತವಾದ ಉತ್ತರವಿಲ್ಲ! ’ಜರ್ಮನಿ ತುಂಬಾ ಸುರಕ್ಷಿತ(safe)’, ’ಜರ್ಮನಿಯಲ್ಲಿ ಅವಕಾಶಗಳಿವೆ’, ’ಮಕ್ಕಳಿಗೆ ಉತ್ತಮ ಶಿಕ್ಷಣ ಬೇಕು’, ’ಕೆಲಸ ಬೇಕು’... ಹೀಗೆ ಬೇರೆ ಬೇರೆ ಉತ್ತರಗಳು. ಆದರೆ ಇದ್ಯಾವುದೂ ಜರ್ಮನಿಯೇ ಯಾಕೆ ಎಂಬ ಪ್ರಶ್ನೆಗೆ ಖಚಿತವಾದ ಉತ್ತರವಾಗುವುದಿಲ್ಲ. ಫ್ರಾನ್ಸ್ ಯಾಕಾಗಬಾರದು? ಇಟಲಿ ಯಾಕೆ ಬೇಡ? ಸ್ವೀಡನ್‍ಗೆ ಏನಾಗಿದೆ? ಆಸ್ಟ್ರಿಯಾ? ಪೋಲಂಡ್? ಇಂಗ್ಲಂಡ್? ಅಮೇರಿಕಾ? ಯಾಕಾಗಬಾರದು?
ಜರ್ಮನಿಯೇ ಯಾಕಾಗಬೇಕು?
ಒಪ್ಪೊತ್ತಿನ ಊಟ (Bread & butter): ಎರಡನೆಯ ಮಾಹಾಯುದ್ಧದಲ್ಲಿ ಪೂರ್ತಿ ನೆಲಕ್ಕಚ್ಚಿದ ಜರ್ಮನಿ ಒಂದು ದೊಡ್ಡ ಆರ್ಥಿಕತೆಯಾಗಿ ಬೆಳೆದು ನಿಂತದ್ದು ಪ್ರಜೆಗಳ ಶ್ರಮ, ಬದ್ಧತೆ, ಕಾರ್ಯಕ್ಷಮತೆಗೆ ಜಗತ್ತಿಗೇ ಮಾದರಿಯಾದಂತಹದ್ದು. ಆದರೆ ಆ ಕಾಲದಲ್ಲಿ ಜರ್ಮನಿಯ ಕಾರ್ಖಾನೆಗಳಲ್ಲಿ ಬೆವರು ಸವೆಸಿ ದುಡಿದವರೆಲ್ಲಾ ಇಂದು ವಿಶ್ರಾಂತ ಜೇವನ ನಡೆಸುತ್ತಿದ್ದಾರೆ. ಅವರೆಲ್ಲರ ಶ್ರಮದ ಬದುಕು ಮತ್ತು ಕಾರ್ಯಕ್ಷಮತೆಯ ಫಲವಾಗಿ ಆರ್ಥಿಕತೆ ಬೆಳೆಯಿತು, ಶಿಕ್ಷಣ ವ್ಯವಸ್ಥೆ ಸದೃಢವಾಯಿತು. ಆದರೆ ಅದರ ಇನ್ನೊಂದು ಮಗ್ಗುಲು ಕೌಟುಂಬಿಕ ವ್ಯವಸ್ಥೆಯ ಮೇಲೆ ಆದ ಪರಿಣಾಮ. ನಿಧಾನವಾಗಿ ನಂತರದ ತಲೆಮಾರಿನ ಜನ ಮಕ್ಕಳು ಬೇಡ ಎಂಬ ಮನಸ್ಥಿತಿಗೆ ಬಂದರು. ಎಷ್ಟೋ ಜನರಿಗೆ ಮಕ್ಕಳು ಅವರ ಔದ್ಯೋಗಿಕ ಉನ್ನತಿಗೆ ಅಡ್ಡಿಯಾಗಿ ಕಂಡರು. ಅದರ ಪರಿಣಾಮ ಜರ್ಮನಿ ಎದುರಿಸುತ್ತಿರುವ ಮುಖ್ಯ ಸಮಸ್ಯೆ ಹೆಚ್ಚುತ್ತಿರುವ ಹೆಚ್ಚುತ್ತಿರುವ ಸರಾಸರಿ ವಯಸ್ಸು (aging population). ಜರ್ಮನಿಯಲ್ಲಿ ಸರಾಸರಿ ವಯಸ್ಸು ಸುಮಾರು 46.
ಹೀಗಾಗಿ ಜರ್ಮನಿಗೆ ದುಡಿಯುವ ಕೈಗಳು ಬೇಕು ಎಂಬುದು ಪ್ರಶ್ನಾತೀತ. ಉತ್ತಮ ವೃತ್ತಿ ಕೌಶಲ ಹೊಂದಿದ್ದರೆ ಮತ್ತು ಜರ್ಮನ್ ಭಾಷೆ ಗೊತ್ತಿದ್ದರೆ ಅಲ್ಲಿ ಕೆಲಸ ಸಿಗುವುದೇನೂ ಕಷ್ಟವಲ್ಲ. ಆದರೆ, ಸಿರಿಯಾ ಲಿಬಿಯಾದಿಂದ ಹೋಗುತ್ತಿರುವ ನಿರಾಶ್ರಿತರಿಗೆ ಜರ್ಮನಿಗೆ ಬೇಕಿರುವ ವೃತ್ತಿ ಕೌಶಲವಿದೆಯೇ?
ಜರ್ಮನಿಯಲ್ಲಿನ ಅವಕಾಶಗಳನ್ನು ಬಾಚಿಕೊಳ್ಳಲು ಬೇರೆ ಬೇರೆ ದೇಶಗಳಿಂದ ನುರಿತ ತಂತ್ರಜ್ಞರು ಪೈಪೋಟಿ ನಡೆಸುತ್ತಿದ್ದಾರೆ. ಅವರ ಜೊತೆ ಪೈಪೋಟಿ ಮಾಡುವ ಸಾಮರ್ಥ್ಯ ನಿರಾಶ್ರಿತರಿಗಿದೆಯೇ? ನಿರಾಶ್ರಿತರು ಕೇವಲ ಸಣ್ಣಮಟ್ಟಿನ ಕೆಲಗಳಿಗೆ ಹೋಗಬೇಕಾಗಬಹುದು. ಆದರೆ ಯಂತ್ರೋಪಕರಣಗಳಿಂದ ತುಂಬಿರುವ ಜರ್ಮನಿಯಲ್ಲಿ ಚಿಲ್ಲರೆ ಕೆಲಸಗಳು ಕಡಿಮೆ. ಯಂತ್ರಗಳೇ ಹೆಚ್ಚಿನ ಕೆಲಸ ಮಾಡುತ್ತವೆ. ಇದರಿಂದ ಜರ್ಮನಿಯಲ್ಲೂ ನಿರಾಶ್ರಿತರು ನಿರುದ್ಯೋಗಿಗಳಾಗಿ ಉಳಿದರೆ?
ಶಿಕ್ಷಣ: ಜರ್ಮನಿ ಉತ್ತಮ ಶಿಕ್ಷಣ ವ್ಯವಸ್ಥೆ ಹೊಂದಿದೆ. ಹೆಚ್ಚು ಕಡಿಮೆ ಖರ್ಚಿಲ್ಲದೆಯೇ ಪ್ರಾಥಮಿಕ ಹಂತದ ಶಿಕ್ಷಣ ಲಭ್ಯವಿದೆ. ಇದು ಪ್ರಶ್ನಾತೀತ. ಉನ್ನತ ಶಿಕ್ಷಣವೂ ಕಡಿಮೆ ಖರ್ಚಿನಲ್ಲಿ ಪಡೆಯಬಹುದು. ಆದರೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ತುಂಬಾ ಪೈಪೋಟಿ ಇದೆ ಎಂಬುದನ್ನು ಮರೆಯಬಾರದು.
ಆದರೆ ಹೆಚ್ಚುತ್ತಿರುವ ಸರಾಸರಿ ವಯಸ್ಸು (aging population) ಕೇವಲ ಜರ್ಮನಿಯ ತೊಂದರೆಯಲ್ಲ. ಇದು ಯುರೋಪಿನ ಹೆಚ್ಚಿನ ದೇಶಗಳು ಎದುರಿಸುತ್ತಿರುವ ಸಮಸ್ಯೆ! ಹೆಚ್ಚಿನ ಮಾಹಿತಿಗೆ ಈ link ನೋಡಿ: world.bymap.org/MedianAge.htm. ಶಿಕ್ಷಣವೂ ಅಷ್ಟೇ ಬಹುತೇಕ ಯುರೋಪಿಯನ್ ದೇಶಗಳಲ್ಲಿ ಪ್ರಾಥಮಿಕ ಶಿಕ್ಷಣ ಸುಲಭವಾಗಿ ಖರ್ಚಿಲ್ಲದೇ ದೊರೆಯುತ್ತದೆ. ಹಾಗಿರುವಾಗ ಬೇರೆ ಯುರೋಪಿಯನ್ ದೇಶ ಯಾಕಾಗಬಾರದು?
ಇತರೇ ಯುರೋಪಿಯನ್ ದೇಶಗಳಿಗಿಂತ ಜರ್ಮನಿ ಭಿನ್ನವಾಗುವುದು ತನ್ನ ಆರ್ಥಿಕ ಸದೃಢತೆಯಲ್ಲಿ. ಯುರೋಪಿಯನ್ ಒಕ್ಕೂಟದ ಬಹುತೇಕ ದೇಶಗಳು ಆರ್ಥಿಕವಾಗಿ ದುರ್ಬಲವಾಗಿದೆ. ಯುರೋಪಿಯನ್ ಒಕ್ಕೂಟದ ಆರ್ಥಿಕತೆಯ ಆಧಾರ ಸ್ಥಂಬವೇ ಜರ್ಮನಿ, ಬಿಟ್ಟರೆ ಫ್ರಾನ್ಸ್.
ಇದನ್ನು ಎರಡು ರೀತಿಯಲ್ಲಿ ನೋಡಬಹುದು. ಆರ್ಥಿಕವಾಗಿ ಸದೃಢ ದೇಶದ ಆಶ್ರಯ ಪಡೆಯುವುದು ಯಾವುದೇ ನಿರಾಶ್ರಿತನ ಬಯಕೆಯಾಗಿರುತ್ತದೆ. ಯಾಕೆಂದರೆ ಆತ ಗಂಟುಮೂಟೆ ಕಟ್ಟಿಕೊಂಡು ಮತ್ತೆ ನಿರಾಶ್ರಿತನಾಗಿ ಹೋಗಬಯಸುವುದಿಲ್ಲ. ಒಮ್ಮೆ ಆಶ್ರಯ ಪಡೆದರೆ ಅದು ಶಾಶ್ವಾತವಾಗಿರಬೇಕು ಎಂಬುದು ಸಹಜವಾದ ಬಯಕೆ. ಆದರೆ ಆರ್ಥಿಕವಾಗಿ ಸದೃಢ ದೇಶಗಳು ಸಿರಿಯಾಕ್ಕೆ ಇನ್ನೂ ಹತ್ತಿರದಲ್ಲೇ ಇವೆಯಲ್ಲ. ಸೌದಿ ಅರೇಬಿಯಾ, ದುಬಾಯ್ ಮುಂತಾದ ಶ್ರೀಮಂತ ದೇಶಗಳಲ್ಲಿ ಹಲವಾರು ಹೊಸ ಹೊಸ ಅಭಿವೃದ್ಧಿ ಕಾರ್ಯಗಳು, ಹೊಸ ಯೋಜನೆಗಳು ನಡೆಯುತ್ತಲೇ ಇರುತ್ತವೆ. ಅಲ್ಲೇಕೆ ಆಶ್ರಯ ಪಡೆಯಬಾರದು.
ಅದರಲ್ಲೂ ನಿರಾಶ್ರಿತರನ್ನು ಸ್ವೀಕರಿಸದೆ ’ಜರ್ಮನಿಗೆ ಮಸೀದಿ ನಿರ್ಮಿಸಲು ಸಹಾಯ ಮಾಡುತ್ತೇವೆ’ ಎಂಬ ಹೇಳಿಕೆ ನೀಡುವುದು ನೋಡಿದರೆ ಇದರ ಹಿಂದೆ ಇನ್ನೇನೋ ಹುನ್ನಾರ ಇರುವ ಶಂಕೆ ಮೂಡುತದೆ. ಬೇಕೆಂದೇ ನಿರಾಶ್ರಿತರನ್ನು ಐಸಿಸ್ ಜರ್ಮನಿಯತ್ತ ಅಟ್ಟುತ್ತಿದೆಯೇ? ನಿರಾಶ್ರಿತರ ಹೆಸರಿನಲ್ಲಿ ಜಿಹಾದಿ ಉಗ್ರರು ಜರ್ಮನಿ ತಲುಪುತ್ತಿರಬಹುದೇ? ಇದು ಜರ್ಮನಿಯನ್ನು (ತನ್ಮೂಲಕ ಯುರೋಪಿಯನ್ ಒಕ್ಕೂಟವನ್ನು) ಆರ್ಥಿಕವಾಗಿ ಅಲುಗಾಡಿಸುವ ಮತ್ತು ಯುರೋಪಿನಾದ್ಯಂತ ಇಸ್ಲಾಂಅನ್ನು ಹರಡುವ ಮತ್ತು ಬಲಗೊಳಿಸುವ ತಂತ್ರವೇ ಎಂಬ ಪ್ರಶ್ನೆಗಳೂ ಮೂಡುತ್ತವೆ!
ಸಮೀರ ದಾಮ್ಲೆ
References:
Median Age / Countries of the World
Amid Muslim Refugee Crisis, Saudi Arabia Vows To Build 200 Mosques In Germany
http://kannadaforum.net/thread/4265-%E0%B2%9C%E0%B2%B0%E0%B3%8D%E0%B2%AE%E0%B2%A8%E0%B2%BF%E0%B2%AF%E0%B3%87-%E0%B2%AF%E0%B2%BE%E0%B2%95%E0%B3%86-%E0%B2%AC%E0%B3%87%E0%B2%95%E0%B3%81-%E0%B2%9C%E0%B2%B0%E0%B3%8D%E0%B2%AE%E0%B2%A8%E0%B2%BF%E0%B2%AF%E0%B2%A8%E0%B3%8D%E0%B2%A8%E0%B3%81-%E0%B2%AC%E0%B3%80%E0%B2%B3%E0%B2%BF%E0%B2%B8%E0%B3%81%E0%B2%B5-%E0%B2%B9%E0%B3%81%E0%B2%A8%E0%B3%8D%E0%B2%A8%E0%B2%BE%E0%B2%B0%E0%B2%B5%E0%B3%87/

ತನ್ನೊಡಲ ಅವಕಾಶಗಳೇ ಬೆಂಗಳೂರಿಗೆ ಶಾಪವೇ?
ಇವತ್ತು (ಆಗೊಸ್ಟ್ 22) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ. ಪಾಲಿಕೆಯ ಆಡಳಿತ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರೂ ಪಕ್ಷಗಳು ಪೈಪೋಟಿಯಲ್ಲಿವೆ. ರಾಜಕೀಯ ಪಕ್ಷಗಳು ಮತದಾರರಿಗೆ ಭರವಸೆಗಳ ಮಹಾಪೂರವನ್ನೇ ನೀಡಿವೆ. ಸಿಂಗಾಪುರ ಹಾಂಗ್‍ಕಾಂಗ್ ಮಾದರಿಯಲ್ಲಿ ಬೆಂಗಳೂರು ಅಭಿವೃದ್ಧಿ ಇತ್ಯಾದಿ ಹೇಳಿಕೆಗಳು ಕೇಳಿಬರುತ್ತಿವೆ. ಇದೇ ನಮ್ಮ ದುರಾದೃಷ್ಟ! ನಮ್ಮ ರಾಜಕಾರಣಿಗಳು ಸ್ಮಾರ್ಟ್ ಸಿಟಿ, ಸಿಂಗಾಪುರ, ವೈಫೈ, ಹೈಫೈ ಅಂತ ಮಾತನಾಡುತ್ತಾರೆಯೇ ಹೊರತು ಬೆಂಗಳೂರಿನಲ್ಲಿರುವ ಬಹಳ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ತೊಡಗುವುದಿಲ್ಲ.
ಇವತ್ತು ಬೆಂಗಳೂರನ್ನು ಕಾಡುತ್ತಿರುವ ಮೂಲ ಸಮಸ್ಯೆಗಳಲ್ಲಿ ಪ್ರಮುಖವಾದವು - ಕಸದ ಸಮಸ್ಯೆ, ಎಲ್ಲರಿಗೂ ಶುದ್ಧ ನೀರು, ವಿದ್ಯುತ್ ಸರಬರಾಜು, ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ, ಟ್ರಾಫಿಕ್ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಸರಕಾರಿ ಇಲಾಖೆಗಳಿಗೆ ಹಿಡಿದಿರುವ ಕ್ಯಾನ್ಸರ್ - ಭ್ರಷ್ಟಾಚಾರ. ಇವೆಲ್ಲ ಇಂದು ನಿನ್ನೆ ಹುಟ್ಟಿಕೊಂಡ ಸಮಸ್ಯೆಗಳಲ್ಲ. ಹಲವು ವರ್ಷಗಳಿಂದ ಇರುವ ಸಮಸ್ಯೆಗಳು. ಹಲವಾರು ಪಕ್ಷಗಳ ರಾಜ್ಯ ಸರಕಾರಗಳು, ಹಲವು ಬಿಬಿಎಂಪಿಗಳು ಹಲವಾರು ಮೇಯರ್‌ಗಳು ಆಗಿಹೋದರು. ಆದರೆ ಈ ಸಮಸ್ಯೆಗಳು ಇನ್ನೂ ಜ್ವಲಂತವಾಗಿವೆ ಮತ್ತು ದಿನೇದಿನೇ ಜಟಿಲವಾಗುತ್ತಿವೆ. ಆದರೆ ಯಾವ ಸರಕಾರಗಳೂ ಈ ಸಮಸ್ಯೆಗಳನ್ನು ಸರಿಪಡಿಸಲು ಪೂರ್ಣ ಬದ್ಧತೆಯಿಂದ ಕೆಲಸ ಮಾಡಲಿಲ್ಲ. ಮುರಿದು ಬಿದ್ದ ಗುಡಿಸಲನ್ನು ಸರಿಪಡಿಸುವುದು ಬಿಟ್ಟು ಅರಮನೆ ಕಟ್ಟುವ ಭರವಸೆ ಕೊಟ್ಟು ಏನು ಉಪಯೋಗ?
ಇನ್ನು ಬೆಂಗಳೂರಿನ ಇಂದಿನ ಪರಿಸ್ಥಿಗೆ ನಾಗರಿಕರ ಕೊಡುಗೆ ಬಹಳಷ್ಟಿದೆ. ತನ್ನ ಒಡಲಲ್ಲಿ ತುಂಬಿಕೊಂಡಿರುವ ಅವಕಾಶಗಳೇ ಬೆಂಗಳೂರಿನ ಪಾಲಿಗೆ ಶಾಪವೇನೋ? ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು, ಶಿಕ್ಷಣಕ್ಕಾಗಿ, ದಿನಗೂಲಿಗಾಗಿ ಹೀಗೆ ಹಲವಾರು ಕಾರಣಗಳಿಗೆ ಪ್ರತಿದಿನ ಸಹಸ್ರಾರು ಜನ ದೇಶದ ವಿವಿದೆಡೆಗಳಿಂದ ವಲಸೆ ಬರುತ್ತಾರೆ. ಇವರಲ್ಲಿ ಒಂದಷ್ಟು ಜನರ ಮನಸ್ಸಿನಲ್ಲಿ ಬೆಂಗಳೂರು ತನ್ನದು ಎಂಬ ಭಾವನೆಯೇ ಇಲ್ಲ. ತನಗೆ ಅವಕಾಶ ಕೊಟ್ಟ ನಗರಿ ಎಂಬ ಕನಿಷ್ಠ ಗೌರವವೂ ಇಲ್ಲ. ಬೆಂಗಳೂರಿನ ಕರ್ನಾಟಕದ ಕನ್ನಡ ಭಾಷೆಯ ಬಗೆಗೂ ಗೌರವವಿಲ್ಲ. ಅವರಿಗೆ ಇಲ್ಲಿಯ ಅವಕಾಶಗಳಷ್ಟೇ ಬೇಕು. ತನ್ನದೇನೂ ಜವಾಬ್ದಾರಿಯಿಲ್ಲ ಎಂಬ ಭಾವನೆ ಹೊತ್ತಿರುವ ಬೆಂಗಳೂರಿಗರೂ ಇದ್ದಾರೆ, ಇಲ್ಲವೆಂದಲ್ಲ; ಆದರೆ ಅಂತಹ ಬೆಂಗಳೂರಿಗರ ಸಂಖ್ಯೆ ಕೊಂಚ ಕಡಿಮೆ. ಸುಶಿಕ್ಷಿತರೂ ಎಲ್ಲೆಂದರೆಲ್ಲಿ ಕಸ ಬಿಸಾಡುವುದು, ಸಂಚಾರಿ ನಿಯಮ ಉಲ್ಲಂಘಿಸುವುದು, ಬೇಜವ್ದಾರಿಯಿಂದ ನಡೆದುಕೊಳ್ಳುವುದು ಇವೇ ಇದಕ್ಕೆ ಸಾಕ್ಷಿ.
ಮೂಲ ಬೆಂಗಳೂರಿಗರಲ್ಲಿ ಮತ್ತು ಕನ್ನಡಿಗರಲ್ಲಿ ಬೆಂಗಳೂರು ತನ್ನ ಹಳೆ ಸೊಗಡು ಕಳಕೊಂಡಿದೆ ಎಂಬ ನೋವಿದೆ, ಖೇದವಿದೆ; ಇನ್ನೆಂದೂ ಹಿಂದಿನ ಕಳೆಕಟ್ಟದೇನೋ ಎಂಬ ಚಿಂತೆಯಿದೆ. ಬೆಂಗಳೂರಲ್ಲಿ ಕನ್ನಡತನ ಎಷ್ಟರಮಟ್ಟಿಗೆ ಸತ್ತಿದೆಯೆಂಬುದಕ್ಕೆ ರಾಜಕೀಯ ಪಕ್ಷವೊಂದು ಬಿಬಿಎಂಪಿ ಚುನಾವಣಾ ಪ್ರಣಾಳಿಗೆ ಐದು ಭಾಷೆಗಳಲ್ಲಿ ಪ್ರಕಟಿಸಿರುವಿದೇ ಸಾಕ್ಷಿ.
ಬಿಬಿಎಂಪಿ ಚುನಾವಣೆಯನ್ನೇ ಗಮನಿಸಿ, ಮಧ್ಯಾಹ್ನದ ತನಕ ಸುಮಾರು 21% ಮತದಾನ ಮಾತ್ರ ಆಗಿದೆ. ಮತದಾನದಲ್ಲಿ ಬೆಂಗಳೂರಿಗರ ತೋರುತ್ತಿರುವ ಆಸಕ್ತಿ ನೋಡಿದರೆ ಬಹುಷಃ 50% ಮತದಾನವೂ ನಡೆಯದೇನೋ ಅನ್ನಿಸುತ್ತದೆ. ಮತಕಟ್ಟೆಯ ಕುರಿತು ತಪ್ಪಾದ ಮಾಹಿತಿ, ಮತದಾರರ ಪಟ್ಟಿಯಲ್ಲಿ ಹೆಸರಿರದೆ ಇರುವುದು ಇತ್ಯಾದಿ ತೊಂದರೆಗಳು ಇರಬಹುದು. ಆದರೆ ಹೆಚ್ಚೆಂದರೆ ಹತ್ತು ಶೇಕಡಾ ಮತದಾರರಿಗೆ ಇಂತಹ ಸಮಸ್ಯೆ ಆಗಿರಬಹುದು. ಒಟ್ಟಾರೆಯಾಗಿ ಬೆಂಗಳೂರಿಗರಲ್ಲಿರುವ ಸಾಮಾಜಿಕ ಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ. ಆಡಳಿತದಿಂದ ಎಲ್ಲಾ ಸವಲತ್ತುಗಳನ್ನು ಅಪೇಕ್ಷಿಸುವ ನಾವು ನಮ್ಮ ಕನಿಷ್ಠ ಜವಾಬ್ದಾರಿಯನ್ನೂ ನಿರ್ವಹಿಸದಿದ್ದರೆ ಹೇಗೆ?
http://kannadaforum.net/thread/3834-%E0%B2%A4%E0%B2%A8%E0%B3%8D%E0%B2%A8%E0%B3%8A%E0%B2%A1%E0%B2%B2-%E0%B2%85%E0%B2%B5%E0%B2%95%E0%B2%BE%E0%B2%B6%E0%B2%97%E0%B2%B3%E0%B3%87-%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B2%BF%E0%B2%97%E0%B3%86-%E0%B2%B6%E0%B2%BE%E0%B2%AA%E0%B2%B5%E0%B3%87/

Subscribe to:
Posts (Atom)