ಇವತ್ತು (ಆಗೊಸ್ಟ್ 22) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ. ಪಾಲಿಕೆಯ ಆಡಳಿತ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರೂ ಪಕ್ಷಗಳು ಪೈಪೋಟಿಯಲ್ಲಿವೆ. ರಾಜಕೀಯ ಪಕ್ಷಗಳು ಮತದಾರರಿಗೆ ಭರವಸೆಗಳ ಮಹಾಪೂರವನ್ನೇ ನೀಡಿವೆ. ಸಿಂಗಾಪುರ ಹಾಂಗ್‍ಕಾಂಗ್ ಮಾದರಿಯಲ್ಲಿ ಬೆಂಗಳೂರು ಅಭಿವೃದ್ಧಿ ಇತ್ಯಾದಿ ಹೇಳಿಕೆಗಳು ಕೇಳಿಬರುತ್ತಿವೆ. ಇದೇ ನಮ್ಮ ದುರಾದೃಷ್ಟ! ನಮ್ಮ ರಾಜಕಾರಣಿಗಳು ಸ್ಮಾರ್ಟ್ ಸಿಟಿ, ಸಿಂಗಾಪುರ, ವೈಫೈ, ಹೈಫೈ ಅಂತ ಮಾತನಾಡುತ್ತಾರೆಯೇ ಹೊರತು ಬೆಂಗಳೂರಿನಲ್ಲಿರುವ ಬಹಳ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ತೊಡಗುವುದಿಲ್ಲ.
ಇವತ್ತು ಬೆಂಗಳೂರನ್ನು ಕಾಡುತ್ತಿರುವ ಮೂಲ ಸಮಸ್ಯೆಗಳಲ್ಲಿ ಪ್ರಮುಖವಾದವು - ಕಸದ ಸಮಸ್ಯೆ, ಎಲ್ಲರಿಗೂ ಶುದ್ಧ ನೀರು, ವಿದ್ಯುತ್ ಸರಬರಾಜು, ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ, ಟ್ರಾಫಿಕ್ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಸರಕಾರಿ ಇಲಾಖೆಗಳಿಗೆ ಹಿಡಿದಿರುವ ಕ್ಯಾನ್ಸರ್ - ಭ್ರಷ್ಟಾಚಾರ. ಇವೆಲ್ಲ ಇಂದು ನಿನ್ನೆ ಹುಟ್ಟಿಕೊಂಡ ಸಮಸ್ಯೆಗಳಲ್ಲ. ಹಲವು ವರ್ಷಗಳಿಂದ ಇರುವ ಸಮಸ್ಯೆಗಳು. ಹಲವಾರು ಪಕ್ಷಗಳ ರಾಜ್ಯ ಸರಕಾರಗಳು, ಹಲವು ಬಿಬಿಎಂಪಿಗಳು ಹಲವಾರು ಮೇಯರ್‌ಗಳು ಆಗಿಹೋದರು. ಆದರೆ ಈ ಸಮಸ್ಯೆಗಳು ಇನ್ನೂ ಜ್ವಲಂತವಾಗಿವೆ ಮತ್ತು ದಿನೇದಿನೇ ಜಟಿಲವಾಗುತ್ತಿವೆ. ಆದರೆ ಯಾವ ಸರಕಾರಗಳೂ ಈ ಸಮಸ್ಯೆಗಳನ್ನು ಸರಿಪಡಿಸಲು ಪೂರ್ಣ ಬದ್ಧತೆಯಿಂದ ಕೆಲಸ ಮಾಡಲಿಲ್ಲ. ಮುರಿದು ಬಿದ್ದ ಗುಡಿಸಲನ್ನು ಸರಿಪಡಿಸುವುದು ಬಿಟ್ಟು ಅರಮನೆ ಕಟ್ಟುವ ಭರವಸೆ ಕೊಟ್ಟು ಏನು ಉಪಯೋಗ?
ಇನ್ನು ಬೆಂಗಳೂರಿನ ಇಂದಿನ ಪರಿಸ್ಥಿಗೆ ನಾಗರಿಕರ ಕೊಡುಗೆ ಬಹಳಷ್ಟಿದೆ. ತನ್ನ ಒಡಲಲ್ಲಿ ತುಂಬಿಕೊಂಡಿರುವ ಅವಕಾಶಗಳೇ ಬೆಂಗಳೂರಿನ ಪಾಲಿಗೆ ಶಾಪವೇನೋ? ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು, ಶಿಕ್ಷಣಕ್ಕಾಗಿ, ದಿನಗೂಲಿಗಾಗಿ ಹೀಗೆ ಹಲವಾರು ಕಾರಣಗಳಿಗೆ ಪ್ರತಿದಿನ ಸಹಸ್ರಾರು ಜನ ದೇಶದ ವಿವಿದೆಡೆಗಳಿಂದ ವಲಸೆ ಬರುತ್ತಾರೆ. ಇವರಲ್ಲಿ ಒಂದಷ್ಟು ಜನರ ಮನಸ್ಸಿನಲ್ಲಿ ಬೆಂಗಳೂರು ತನ್ನದು ಎಂಬ ಭಾವನೆಯೇ ಇಲ್ಲ. ತನಗೆ ಅವಕಾಶ ಕೊಟ್ಟ ನಗರಿ ಎಂಬ ಕನಿಷ್ಠ ಗೌರವವೂ ಇಲ್ಲ. ಬೆಂಗಳೂರಿನ ಕರ್ನಾಟಕದ ಕನ್ನಡ ಭಾಷೆಯ ಬಗೆಗೂ ಗೌರವವಿಲ್ಲ. ಅವರಿಗೆ ಇಲ್ಲಿಯ ಅವಕಾಶಗಳಷ್ಟೇ ಬೇಕು. ತನ್ನದೇನೂ ಜವಾಬ್ದಾರಿಯಿಲ್ಲ ಎಂಬ ಭಾವನೆ ಹೊತ್ತಿರುವ ಬೆಂಗಳೂರಿಗರೂ ಇದ್ದಾರೆ, ಇಲ್ಲವೆಂದಲ್ಲ; ಆದರೆ ಅಂತಹ ಬೆಂಗಳೂರಿಗರ ಸಂಖ್ಯೆ ಕೊಂಚ ಕಡಿಮೆ. ಸುಶಿಕ್ಷಿತರೂ ಎಲ್ಲೆಂದರೆಲ್ಲಿ ಕಸ ಬಿಸಾಡುವುದು, ಸಂಚಾರಿ ನಿಯಮ ಉಲ್ಲಂಘಿಸುವುದು, ಬೇಜವ್ದಾರಿಯಿಂದ ನಡೆದುಕೊಳ್ಳುವುದು ಇವೇ ಇದಕ್ಕೆ ಸಾಕ್ಷಿ.
ಮೂಲ ಬೆಂಗಳೂರಿಗರಲ್ಲಿ ಮತ್ತು ಕನ್ನಡಿಗರಲ್ಲಿ ಬೆಂಗಳೂರು ತನ್ನ ಹಳೆ ಸೊಗಡು ಕಳಕೊಂಡಿದೆ ಎಂಬ ನೋವಿದೆ, ಖೇದವಿದೆ; ಇನ್ನೆಂದೂ ಹಿಂದಿನ ಕಳೆಕಟ್ಟದೇನೋ ಎಂಬ ಚಿಂತೆಯಿದೆ. ಬೆಂಗಳೂರಲ್ಲಿ ಕನ್ನಡತನ ಎಷ್ಟರಮಟ್ಟಿಗೆ ಸತ್ತಿದೆಯೆಂಬುದಕ್ಕೆ ರಾಜಕೀಯ ಪಕ್ಷವೊಂದು ಬಿಬಿಎಂಪಿ ಚುನಾವಣಾ ಪ್ರಣಾಳಿಗೆ ಐದು ಭಾಷೆಗಳಲ್ಲಿ ಪ್ರಕಟಿಸಿರುವಿದೇ ಸಾಕ್ಷಿ.
ಬಿಬಿಎಂಪಿ ಚುನಾವಣೆಯನ್ನೇ ಗಮನಿಸಿ, ಮಧ್ಯಾಹ್ನದ ತನಕ ಸುಮಾರು 21% ಮತದಾನ ಮಾತ್ರ ಆಗಿದೆ. ಮತದಾನದಲ್ಲಿ ಬೆಂಗಳೂರಿಗರ ತೋರುತ್ತಿರುವ ಆಸಕ್ತಿ ನೋಡಿದರೆ ಬಹುಷಃ 50% ಮತದಾನವೂ ನಡೆಯದೇನೋ ಅನ್ನಿಸುತ್ತದೆ. ಮತಕಟ್ಟೆಯ ಕುರಿತು ತಪ್ಪಾದ ಮಾಹಿತಿ, ಮತದಾರರ ಪಟ್ಟಿಯಲ್ಲಿ ಹೆಸರಿರದೆ ಇರುವುದು ಇತ್ಯಾದಿ ತೊಂದರೆಗಳು ಇರಬಹುದು. ಆದರೆ ಹೆಚ್ಚೆಂದರೆ ಹತ್ತು ಶೇಕಡಾ ಮತದಾರರಿಗೆ ಇಂತಹ ಸಮಸ್ಯೆ ಆಗಿರಬಹುದು. ಒಟ್ಟಾರೆಯಾಗಿ ಬೆಂಗಳೂರಿಗರಲ್ಲಿರುವ ಸಾಮಾಜಿಕ ಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ. ಆಡಳಿತದಿಂದ ಎಲ್ಲಾ ಸವಲತ್ತುಗಳನ್ನು ಅಪೇಕ್ಷಿಸುವ ನಾವು ನಮ್ಮ ಕನಿಷ್ಠ ಜವಾಬ್ದಾರಿಯನ್ನೂ ನಿರ್ವಹಿಸದಿದ್ದರೆ ಹೇಗೆ?
http://kannadaforum.net/thread/3834-%E0%B2%A4%E0%B2%A8%E0%B3%8D%E0%B2%A8%E0%B3%8A%E0%B2%A1%E0%B2%B2-%E0%B2%85%E0%B2%B5%E0%B2%95%E0%B2%BE%E0%B2%B6%E0%B2%97%E0%B2%B3%E0%B3%87-%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B2%BF%E0%B2%97%E0%B3%86-%E0%B2%B6%E0%B2%BE%E0%B2%AA%E0%B2%B5%E0%B3%87/

No comments:
Post a Comment