Tuesday, November 17, 2015

ಕಾರ್ನಾಡ್ ಅವರೇ - ಇದನ್ನು ತೆವಲು ಅನ್ನದೆ ಇನ್ನೇನು ಹೇಳಲು ಸಾಧ್ಯ?

ಒಂದು ಕಡೆ ಟಿಪ್ಪು ಜಯಂತಿಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಕೊಡಗಿನಲ್ಲಿ ಒಂದು ಜೀವ ಬಲಿಯಾಗಿದೆ. ಟಿಪ್ಪುವಿನ ಧರ್ಮ ಸಹಿಷ್ಣುತೆಯ ಕುರಿತು ಪ್ರಶ್ನೆಗಳು ಇವೆ. ಟಿಪ್ಪುವಿನ ದೇಶಪ್ರೇಮದ ಬಗ್ಗೆ ಪ್ರಶ್ನೆಗಳು ಇವೆ.
ಟಿಪ್ಪು ಜಯಂತಿಯ ಕುರಿತು ಹೊಗೆಯಾಡುತ್ತಿದ್ದ ಅಸಮಧಾನ ಬೆಂಕಿಯಾಗಿ ಉರಿಯತೊಡಗಿದೆ.ಇಂತಹ ಸಂದರ್ಭದಲ್ಲಿ ಸರಕಾರ ಏನು ಮಾಡಬೇಕು? ಶಾಂತಿ ಕಾಪಾಡಲು ಕಾರ್ಯಪ್ರವೃತ್ತವಾಗಬೇಕು ತಾನೇ?.ಅದರ ಸುಳಿವಂತೂ ಕಾಣುತ್ತಿಲ್ಲ!.

ಸಮಾಜದ ಮಾನ್ಯರೆನಿಸಿದವರು ಏನು ಮಾಡಬೇಕು? ಉತ್ತರ ಮಹಾನ್ ಬುದ್ಧಿಜೀವಿ ಕಾರ್ನಾಡ್ ಕೊಟ್ಟಿದ್ದಾರೆ. ವಿವಾದಾತ್ಮಕ ಹೇಳಿಕೆ ಕೊಟ್ಟು ಉರಿಯುವ ಬೆಂಕಿಗೆ ತುಪ್ಪ ಹಾಕಬೇಕು. ತಾವಿನ್ನೂ ಸಮಾಜದಲ್ಲಿ ಪ್ರಸ್ತುತ ಅಂತ ತೋರಿಸಿಕೊಳ್ಳಬೇಕು.

ಇಲ್ಲದಿದ್ದರೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬೆಂಗಳೂರಿನ ಜನಕ ನಾಡಪ್ರಭು ಕೆಂಪೇಗೌಡರ ಹೆಸರನ್ನು ತೆಗೆದು ಟಿಪ್ಪು ಹೆಸರಿಡಿ ಎಂಬ ಬಿಟ್ಟಿ ಸಲಹೆ ಏತಕ್ಕೆ?.ಕೆಂಪೇಗೌಡರು ಕರ್ನಾಟಕ ಕಂಡ ಪ್ರಶ್ನಾತೀತ ನಾಯಕರೇ ಹೊರತು ಟಿಪ್ಪು ಅಲ್ಲ!.

ಸಮಾಜದಲ್ಲಿ ವಿವಾದಗಳು ಹುಟ್ಟಿಕೊಂಡಾಗ ಜನರ ಭಾವನೆಗಳ ವಿರುದ್ಧ ಹೇಳಿಕೆ ಕೊಡುವುದು ಇವರ ಖಯಾಲಿಯಾಗಿಬಿಟ್ಟಿದೆ. ಇವರ ಇಂತಹ ಕೃತ್ಯಗಳನ್ನು ತಮ್ಮ ಹೇಳಿಕೆಗಳ ಮೂಲಕ ಸಮಾಜದ ಸಾಮರಸ್ಯವನ್ನು ಹಾಳುಮಾಡಿ ತಮ್ಮನ್ನು ಪ್ರಚಾರದಲ್ಲಿಟ್ಟುಕೊಳ್ಳುವ ತೆವಲು ಅನ್ನದೆ ಇನ್ನೇನು ಹೇಳಬೇಕು?.

ಇಂತಹ ಹೇಳಿಕೆಗಳಿಂದ ನಿಮ್ಮ ಬೇಳೆ (ಬೀಫ್) ಬೇಯುವುದರ ಹೊರತು ಬೇರೇನು ಲಾಭವಿದೆ ಹೇಳಿ ಕಾರ್ನಾಡರೇ...


http://kannadaforum.net/thread/4610-%E0%B2%95%E0%B2%BE%E0%B2%B0%E0%B3%8D%E0%B2%A8%E0%B2%BE%E0%B2%A1%E0%B3%8D-%E0%B2%85%E0%B2%B5%E0%B2%B0%E0%B3%87-%E0%B2%87%E0%B2%A6%E0%B2%A8%E0%B3%8D%E0%B2%A8%E0%B3%81-%E0%B2%A4%E0%B3%86%E0%B2%B5%E0%B2%B2%E0%B3%81-%E0%B2%85%E0%B2%A8%E0%B3%8D%E0%B2%A8%E0%B2%A6%E0%B3%86-%E0%B2%87%E0%B2%A8%E0%B3%8D%E0%B2%A8%E0%B3%87%E0%B2%A8%E0%B3%81-%E0%B2%B9%E0%B3%87%E0%B2%B3%E0%B2%B2%E0%B3%81-%E0%B2%B8%E0%B2%BE%E0%B2%A7%E0%B3%8D%E0%B2%AF/

No comments:

Post a Comment