Saturday, March 21, 2020

ಜನತಾ ಕರ್ಪ್ಯೂ

ಕರೋನ ವೈರಸ್ ಜೀವಾವಧಿ ಬರೇ 12 ಗಂಟೆಗಳು. ಜನತಾ ಕರ್ಫ್ಯೂ ಅವಧಿ 14 ಗಂಟೆಗಳು.
ಈ ತರ ಮಾಡುವುದರಿಂದ  ಸಾರ್ವಜನಿಕ ಜಾಗಗಳಲ್ಲಿ ತಗಲಿ ಕೊಂಡಿರುವ ಕರೋನ ವೈರಸ್ ಗಳು ಯಾರೂ ಮುಟ್ಟದೆ ತನ್ನ ತಾನೇ ಸಾಯುವ ಸಾಧ್ಯತೆ ಇದೆ. ನಾಳೆ ಒಂದು ದಿನ ಜನತಾ ಕರ್ಫ್ಯೂ ಮಾಡಿದರೆ ಕೊರೊನಾ ಸೋಂಕು ಭಾರತದಿಂದ ನಿರ್ಮೂಲನೆ ಸಾಧ್ಯ ಎಂಬರ್ಥದ ಮೇಸೇಜ್ ಗಳು ಓಡಾಡುತ್ತಿವೆ.
ಈಗ ಪ್ರಾರಂಭವಾಗಿರುವ ವೈರಸ್ ನ ಹೆಸರು ಕೋವಿಡ್ ೧೯ (COVID 19). ಇದು ಕೊರೊನಾ ವೈರಸ್ (Corona virus) ಎಂಬ ಪ್ರಭೇದಕ್ಕೆ ಸೇರುತ್ತದೆ.  WHO defenition  ಪ್ರಕಾರcoronaviruses is a large family of viruses that cause illness ranging from the common cold to more severe diseases such as Middle East Respiratory Syndrome (MERS-CoV) and Severe Acute Respiratory Syndrome (SARS-CoV).  ಅಂದರೆ ಸಾಮಾನ್ಯ ಶೀತದಿಂದ ತೀವ್ರ ಉಸಿರಾಟದ ತೊಂದರೆ ಉಂಟುಮಾಡಬಲ್ಲ ವೈರಾಣುಗಳು ಈ ಪ್ರಭೇದಕ್ಕೆ ಸೇರುತ್ತವೆ.
COVID 19 ಯಾವ surface ಗಳಲ್ಲಿ ಎಷ್ಟು ಹೊತ್ತು ಬದುಕುತ್ತದೆ ಎಂದು ಇಲ್ಲಿಯವರೆಗೆ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಕೆಲ ಗಂಟೆಗಳಿಂದ ಕೆಲವು ದಿನಗಳವರೆಗೂ ಬದುಕಬಹುದು ಎಂದು ಸದ್ಯದ ಅಂದಾಜು.
ಈಗಾಗಲೇ ನಮಗೆ ತಿಳಿದಿರುವ ಕೊರೊನಾ ವೈರಸ್ ಗಳಲ್ಲಿ ಕೆಲವು plastic  ಮತ್ತು metal surface ಗಳ ಮೇಲೆ ಮೂರು ದಿನಗಳವರೆಗೂ ಬದುಕುತ್ತವೆ ಅನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.  ಆದರೆ ಕೋವಿಡ್ ೧೯ ಎಷ್ಟು ಸಮಯ ಬದುಕುತ್ತದೆ ಎನ್ನುವುದಕ್ಕೆ ಸ್ಪಷ್ಟ ಉತ್ತರ ಇನ್ನೂ ಸಿಕ್ಕಿಲ್ಲ.

ಕೊರೊನಾ ವೈರಸ್ ಗಳು ಜನಸಂಪರ್ಕದಿಂದ ಹರಡುವ ಕಾರಣ (especially direct or indirect contact with the minute droplets during coughing), ಅಂತರ ಕಾಯ್ದುಕೊಳ್ಳುವುದು ಬಹುಮುಖ್ಯ.

ಇನ್ನು ಕೆಲ ವ್ಯಕ್ತಿಗಳಿಗೆ ಕೊವಿಡ್ ಸೋಂಕು ತಗುಲಿದರೂ ಯಾವುದೇ ರೋಗಲಕ್ಷಣಗಳಿಲ್ಲದೆ ಹೋಗಬಹುದು ಎಂದೂ ವಿಜ್ಞಾನಿಗಳು ಹೇಳುತ್ತಾರೆ.
ಇನ್ನೊಂದು statistics ಪ್ರತಿ 100 identified case ಗಳಿಗೆ 1700 unidentified cases ಇರುವ ಸಾಧ್ಯತೆ ಇದೆ ಎಂದು ಹೇಳುತ್ತದೆ!

ಎಲ್ಲಕ್ಕಿಂತ ಮುಖ್ಯವಾಗಿ ಇದಕ್ಕೆ ಇನ್ನೂ ಔಷಧ ಕಂಡುಹಿಡಿಯದ ಕಾರಣ social distancing ಮೂಲಕ ಸೋಂಕು ಹರಡದಂತೆ ತಡೆಯುವುದೇ ಬಹುಮುಖ್ಯ.

ಈ ನಿಟ್ಟಿನಲ್ಲಿ ಮೋದಿಯವರು ಕರೆಕೊಟ್ಟಿರುವ ಜನತಾ ಕರ್ಪ್ಯೂ ಬಹಳ ಒಳ್ಳೆಯ ವಿಷಯ. ಹಾಗೆಂದು  22  ಮಾರ್ಚ್ ಭಾನುವಾರ  ಸಂಜೆಯ ನಂತರ ಭಾರತದಿಂದ ಕೊರೊನಾ ಮಾಯವಾಗುತ್ತದೆ ಎಂದು ಭಾವಿಸಬೇಡಿ.
ಮುಂದಿನ ಕೆಲ ವಾರ ಎಷ್ಟು ಸಾಧ್ಯವೋ ಅಷ್ಟು ಹೊರಗೆ ಹೋಗುವುದನ್ನು, ಪ್ರಯಾಣವನ್ನು ತಪ್ಪಸಿ ಅಥವಾ ಕಡಿಮೆ ಮಾಡೋಣ. ಸಾರ್ವಜನಿಕ ಸ್ಥಳಗಳಲ್ಲಿ ಕೊಂಚ ಅಂತರ ಕಾಯ್ದುಕೊಳ್ಳೋಣ.

ಆರೋಗ್ಯ ಸಚಿವಾಲಯದ  website  ನಲ್ಲಿ ಸಾಕಷ್ಟು ಮಾಹಿತಿ ಇದೆ:  https://www.mohfw.gov.in/
 WHO website  ನಲ್ಲೂ ಸಾಕಷ್ಟು ಮಾಹಿತಿ ಇದೆ:  https://www.who.int/emergencies/diseases/novel-coronavirus-2019


Image source: https://intermountainhealthcare.org/

Friday, March 20, 2020

ರೋಗಿ ಸಂಖ್ಯೆ 31

ರೋಗಿ ಸಂಖ್ಯೆ 31

ದಕ್ಷಿಣ ಕೊರಿಯಾದಲ್ಲಿ ಮೊದಲ ಕೊರೊನಾ ಪ್ರಕರಣ ದಾಖಲಾದದ್ದು ಜನವರಿ 20ರಂದು. ಚೀನಾದ ಜೊತೆ ಗಡಿ ಹಂಚಿಕೊಂಡಿರುವ ಕೊರಿಯಾದ ಸರಕಾರ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಸಾಕಷ್ಟು ತಯಾರಿ ಮಾಡಿಕೊಂಡಿತ್ತು. ಜನವರಿ 20ರಿಂದ ಫೆಬ್ರವರಿ ಮಧ್ಯದವರೆಗೆ ಸುಮಾರು ನಾಲ್ಕು ವಾರಗಳಲ್ಲಿ ರೋಗ ಹರಡುವಿಕೆ ಹತೋಟಿಯಲ್ಲೇ ಇತ್ತು, ರೋಗಿಗಳ ಸಂಖ್ಯೆ 30 ದಾಟಲಿಲ್ಲ. ಆದರೆ ಮುಂದಿನ ಮೂರು ವಾರಗಳಲ್ಲಿ ಕೊರೊನಾ ಪೀಡಿತರ ಸಂಖ್ಯೆ 30ರಿಂದ 5000ದಾಟಿತ್ತು! ಮತ್ತೆ ಕೆಲವೇ ದಿನಗಳಲ್ಲಿ ರೋಗಿಗಳ ಸಂಖ್ಯೆ ಏಕಾಏಕಿ ಏರಿ ಸಾವಿರದಿಂದ ಎಂಟು ಸಾವಿರ ತಲುಪಿತು. 

ಇದಕ್ಕೆಲ್ಲಾ ಕಾರಣ ಶಿನ್ ಚೆನ್ ಜಿ (shincheonji) ಎಂಬ ಒಂದು ಪಂಥಕ್ಕೆ ಸೇರಿದ ಒಬ್ಬ ವ್ಯಕ್ತಿ! Shincheonji Church of Jesus ಎಂಬುದು 1984ರಲ್ಲಿ ದಕ್ಷಿಣ ಕೊರಿಯಾದಲ್ಲಿ ಹುಟ್ಟಿಕೊಂಡ ಒಂದು ಪಂಥ. ಲೀ ಮನ್ ಹಿ ಈ ಪಂಥದ ಸ್ಥಾಪಕ ಮತ್ತು ಮುಖ್ಯಸ್ಥ. ಈ ಪಂಥದವರು ಈಗ ಜಗತ್ತಿನ ಹಲವಾರು ದೇಶಗಳಲ್ಲಿ ಇದ್ದಾರೆ. ಇವರ ವಿಶೇಷತೆ ಏನೆಂದರೆ ಅವರು ಈ ಪಂಥಕ್ಕೆ ಸೇರಿದ್ದಾರೆ ಎಂಬುದನ್ನು ಗೌಪ್ಯವಾಗಿ ಇಡುತ್ತಾರಂತೆ. ಗಂಡ ಹೆಂಡಿರು ಈ ಪಂಥವನ್ನು ಅನುಸರಿಸುತ್ತಿದ್ದರೂ ಒಬ್ಬರಿಗೊಬ್ಬರು ತಿಳಿಸುವುದಿಲ್ಲವಂತೆ. ಪಂಥದಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳನ್ನು ಗೌಪ್ಯವಾಗಿ ಇಡಲಾಗುತ್ತದಂತೆ. ಇನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡುವುದನ್ನು ಈ ಪಂಥ ಬೆಂಬಲಿಸುವುದಿಲ್ಲವಂತೆ. 
ಇಂತಹ ಒಂದು ವಿಶಿಷ್ಟ ಪಂಥಕ್ಕೆ ಸೇರಿದ ವ್ಯಕ್ತಿಯೇ ಕೊರಿಯಾದ 31ನೆ ಕೊರೊನಾ ರೋಗಿ; *ರೋಗಿ 31* ಯಾ *Patient 31*. 

ಮೊದಲ ಬಾರಿ ಅಸ್ವಸ್ಥತಳಾಗಿ ಆಸ್ಪತ್ರೆ ಸೇರಿದಾಗ ಕೊರೊನಾದ ಲಕ್ಷಣಗಳು ಕಂಡುಬಂದರೂ ಪರೀಕ್ಷೆ ಮಾಡಿಸಿಕೊಳ್ಳಲಿಲ್ಲ. ಮಾತ್ರವಲ್ಲ ಸ್ವಲ್ಪ ಗುಣವಾಗುತ್ತಲೇ ಬೇಕಾಬಿಟ್ಟಿ ತಿರುಗಾಟವನ್ನೂ ನಡೆಸಿದ್ದಾಳೆ. ತನ್ನ ಪಂಥದವರ ಭೇಟಿ ಮಾತ್ರವಲ್ಲದೆ ಹೊಟೇಲು, ರೆಸ್ಟೋರೆಂಟ್, ಯಾರದ್ದೋ ಅಂತ್ಯಕ್ರಿಯೆ ಹೀಗೆ ಊರಿಂದೂರಿಗೆ ತಿರುಗಿದ್ದಾಳೆ. ಮತ್ತೆ ಅಸ್ವಸ್ಥತಳಾದಾಗ ಒತ್ತಾಯದ ಮೇರೆಗೆ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾಳೆ. ಆವಾಗ ಕೊರೊನಾ ಇರುವುದು ಖಚಿತವಾಗಿದೆ. ಆದರೆ ಅಷ್ಟರೊಳಗೆ ಕೊರೊನಾವನ್ನು ಹಲವಾರು ಜನರಿಗೆ ಉಡುಗೊರೆಯಾಗಿ ಕೊಟ್ಟು ಆಗಿತ್ತು. 

ಈ ಮಧ್ಯೆ ಆಕೆ ಯಾರನ್ನೆಲ್ಲಾ ಭೇಟಿ ಮಾಡಿದ್ದಾಳೆ ಎಂದು ಶಿನ್ ಚೆನ್ ಜಿ ಪಂಥದ ಮುಖ್ಯಸ್ಥನನ್ನು ಅಧಿಕಾರಿಗಳು ಕೇಳಿದ್ದಾರೆ. ಎಲ್ಲವನ್ನೂ ಗೌಪ್ಯವಾಗಿ ಇಡುವವರು ಇದನ್ನು ಹೇಳಿಯಾರೇ? ಆತ ಒತ್ತಡಕ್ಕೆ ಮಣಿದು ಕೆಲವರ ಹೆಸರು ಹೇಳಿದರೆ ಇನ್ನು ಕೆಲವರ ಹೆಸರು ಹೇಳಲಿಲ್ಲ. ಇದರಿಂದಾಗಿ ಸಕಾಲದಲ್ಲಿ ಎಲ್ಲರನ್ನೂ ಪರೀಕ್ಷೆಗೊಳಪಡಿಸಲು ಆಗಲಿಲ್ಲ. ಪರಿಣಾಮ ಕೇವಲ ಹದಿನೈದು ದಿನಗಳಲ್ಲಿ ಫೆಬ್ರವರಿ ಹದಿನೈದರಿಂದ ಮಾರ್ಚ್ ಒಂದರೊಳಗೆ 30 ಇದ್ದ ಕೊರೊನಾ ರೋಗಿಗಳ ಸಂಖ್ಯೆ  4000 ದಾಟಿತು.

ಶಿನ್ ಚೆನ್ ಜಿ ಪಂಥದ ಮೇಲೆ ಕೊರಿಯನ್ನರು ಆಕ್ರೋಶಗೊಂಡಿದ್ದಾರೆ. ಕೊರಿಯಾ ಸರಕಾರ ಶಿನ್ ಚೆನ್ ಜಿ ಪಂಥದ ಮುಖ್ಯಸ್ಥನ ಮೇಲೆ ಸಾವಿರಾರು ಜನರ ಸಾವಿನ ಆಪಾದನೆ ಹಾಕಿದೆ. ಲೀ ಮನ್ ಹಿ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾಯಿತು. ಕೊನೆಗೂ ಕೊರಿಯಾ ಕೊರೊನಾದ ಹಿಡಿತದಿಂದ ನಿಧಾನವಾಗಿ ಚೇತರಿಸಿಕೊಳ್ಳತೊಡಗಿದೆ ಎನ್ನುತ್ತವೆ ವರದಿಗಳು. 

ಕೊರಿಯಾದ ಕೊರೊನಾ ಕಥೆ ನಮಗೆ ಕೇವಲ ಕಥೆಯಾಗದೆ ಪಾಠವಾಗಬೇಕು. ಮೋದಿಯವರು ಹೇಳಿದಂತೆ ಸಂಕಲ್ಪ ಮತ್ತು ಸಂಯಮದಿಂದ ಮುಂದಿನ ಕೆಲ ವಾರಗಳನ್ನು ಕಳೆಯುವುದು ಮುಖ್ಯ.