Thursday, August 6, 2020

ಸಹಸ್ರ ನಾಮ ತತ್ತುಲ್ಯಂ ರಾಮ ನಾಮ ವರಾನನೆ

ಸುಮಾರು ಐನೂರು ವರ್ಷಗಳ ಕನಸು, ನೂರಾಮೂವತ್ತು ವರ್ಷಗಳ ಕಾನೂನು ಹೋರಾಟದ ನಂತರ ರಾಮಂದಿರಕ್ಕೆ ಶಿಲಾನ್ಯಾಸ ನಿನ್ನೆಯ ದಿನ (5-ಆಗೋಸ್ಟು-2020) ನೆರವೇರಿದೆ. 

ಭಾರತೀಯ ಇತಿಹಾಸದಲ್ಲಿ ಲೋಕಕಲ್ಯಾಣಕ್ಕೆ ರಾಜ ಮಹಾರಾಜರು ಯಜ್ಞಗಳನ್ನು ಮಾಡುವ ಉಲ್ಲೇಖ ಬಹಳಷ್ಟು ಬರುತ್ತದೆ. 
ಆದರೆ ಸ್ವಾತಂತ್ರ್ಯ ನಂತರದ ಭಾರತದಲ್ಲಿ ಇಲ್ಲಿಯವರೆಗೆ ನಮ್ಮ ರಾಜಕೀಯ ನಾಯಕರು, ಆಡಳಿತ ನಡೆಸುತ್ತಿದ್ದವರು ಹಿಂದೂ ಧರ್ಮದ ಆಚರಣೆಗಳನ್ನು, ಪೂಜೆ, ಹೋಮ ಹವನಗಳನ್ನು  ಖಾಸಗಿಯಾಗಿ (ಗುಟ್ಟಾಗಿ) ಮಾಡಿಸತೊಡಗಿದರು ಮತ್ತು ಇವುಗಳ ಉದ್ದೇಶಗಳೂ ಕೂಡಾ ತಮ್ಮ ಸ್ವಂತ ಶ್ರೇಯೋಭಿವೃದ್ಧಿ ಆಗಿರುತ್ತಿತ್ತು. ಹಾಗೆಂದು ಇತರೇ ಮತಗಳ ಆಚರಣೆಗಳಲ್ಲಿ ಸಾರ್ವಜನಿಕವಾಗಿ ಭಾಗವಹಿಸುತ್ತಿದ್ದರು. ಓಲೈಕೆಯ ರಾಜಕೀಯ ಇಲ್ಲಿ ಕೆಲಸಮಾಡುತ್ತಿತ್ತು.
ಅದೆಷ್ಟೋ ಜನರಿಗೆ ಒಂದು ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಪಾಲ್ಗೊಳ್ಳಲು ಕೀಳರಿಮೆ ಮತ್ತು ಹಿಂಜರಿಕೆ ಕೂಡಾ ಇತ್ತು. ಎಲ್ಲಿ ರಾಜಕೀಯ ಲಾಭಗಳನ್ನು ಕಳೆದುಕೊಳ್ಳುತ್ತೇನೋ ಎಂಬ ಭಯ, "politically correct" ಆಗಿರಬೇಕೆಂಬ ಉತ್ಸಾಹ. 
ಈ ದೃಷ್ಟಿಯಿಂದ ಬಹುಸಂಖ್ಯಾತ ಹಿಂದೂಗಳು ಭಾರತದ ರಾಜಕೀಯ ಲೆಕ್ಕಾಚಾರಗಳಲ್ಲಿ ಹೊರಗಿನವರಾಗಿಯೇ ಉಳಿದರು.‌ Inclusive ಎಂದು ಮಾತನಾಡುತ್ತಿದ್ದ ರಾಜಕಾರಣಿಗಳು ಮತ್ತು ಬುದ್ಧಿಜೀವಿಗಳು ಇವರನ್ನು include ಮಾಡಿಕೊಳ್ಳಲೇ ಇಲ್ಲ. 

ಇವತ್ತು ರಾಷ್ಟ್ರದ ಸರ್ವೋಚ್ಚ ನಾಯಕ ಶ್ರೀ ನರೇಂದ್ರ ಮೋದಿಯವರು ಅಯೋಧ್ಯೆಯ ಭೂಮಿಪೂಜೆಯಲ್ಲಿ ಭಾಗಿಯಾಗುವ ಮೂಲಕ ಈ ಸಂಸ್ಕೃತಿಗೆ ತೆರೆ ಎಳೆದಿದ್ದಾರೆ. ಭಾರತ ನಿಜ ಅರ್ಥದಲ್ಲಿ inclusive ಆಗಿದೆ!

No comments:

Post a Comment